Guarantee Schemes: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಬಂದ್.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!

Guarantee Schemes: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಬಂದ್.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!

Guarantee Schemes: ನಮಸ್ಕಾರ ಎಲ್ಲಾ ಕರ್ನಾಟಕದ ಜನತೆಗೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಹುಮತದಿಂದ ಜಯಿಸುವ ಹಿಂದೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ ಎಂದು ಹೇಳಿದರು ಜಯಿಸಿದ ನಂತರ ಐದು ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹಜೋತಿ, ಯುವನಿಧಿ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೆ ತರಲಾಯಿತು, ಈ ಯೋಜನೆಗಳಿಂದ ಸಾಕಷ್ಟು ಸಹಾಯಕವಾಗಿದ್ದು ಇದೀಗ ಯೋಜನೆಗಳ ಕುರಿತು ಒಂದು ದೊಡ್ಡ ಮಾಹಿತಿ ಹೊರ ಬಂದಿದೆ, ಇದರ ಸಂಪೂರ್ಣ ಮಾಹಿತಿ ಕೆಳಗಡೆ ನೀಡಲಾಗಿದೆ.

ಹೌದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡುವ ಸಾಧ್ಯತೆ ಹೆಚ್ಚಾಗುತ್ತಿದೆ, ಯಾಕೆ ಎಂದರೆ ಮುಂಬರುವ ಕೇಂದ್ರ ಬಜೆಟ್ ಅನುದಾನ ಕಡಿಮೆ ಆಗುವ ಸಾಧ್ಯತೆ ತಿಳಿದು ಬಂದಿದೆ. ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ಯೋಜನೆಗಳಿಗಾಗಿ 57,000 ಕೋಟಿ ಹಣವನ್ನು ಮೀಸಲಿಟ್ಟಿತ್ತು, ಇದೀಗ ಬಜೆಟ್ ನಲ್ಲಿ 52 ಸಾವಿರ ಕೋಟಿ ರೂಪಾಯಿ ಇಳಿಕೆ ಮಾಡುವ ಸಾಧ್ಯತೆ ತಿಳಿದು ಬಂದಿದೆ.

ವಿರೋದ್ ಪಕ್ಷದವರು ಹೇಳುತ್ತಿದ್ದಾರೆ ರಸ್ತೆ ಸಾರಿಗೆ ಸಂಚಾರ ಇಲಾಖೆ ಮೇಲೆ ಸಾಕಷ್ಟು ಸಾಲ ಮಾಡಿದ್ದು ಇನ್ನೂ ಇತರ ಸಂಸ್ಥೆಗಳ ಮೇಲೆ ಸಾಲವನ್ನು ಮಾಡಿದೆ. ಇನ್ನು ಮುಂದೆ ಈ ಯೋಜನೆಗಳನ್ನು ಯಾವ ರೀತಿಯಾಗಿ ನಡೆಸುತ್ತಾರೆ ಎಂದು ಹೇಳುತ್ತಿದ್ದಾರೆ.

ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ:

ಈ ಎಲ್ಲ ಮಾಹಿತಿಯ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ ಏನು ಎಂದರೆ ರಾಜ್ಯದ ಯಾವುದೇ ಜನರು ಆತಂಕ ಪಡಬೇಡಿ ಯಾಕೆ ಎಂದರೆ ರಾಜ್ಯದಲ್ಲಿ ಯಾವುದೇ ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ರಾಜ್ಯದ ಜನರಿಗೆ ಈ ಯೋಜನೆಗಳಿಂದ ಹಣ ಬರುವುದು ಸ್ವಲ್ಪ ತಡ ಆಗಬಹುದು ಆದರೆ ಯಾವುದೇ ಕಾರಣಕ್ಕೂ ಈ ಐದು ಗ್ಯಾರಂಟಿ ಯೋಜನೆಗಳನ್ನು ಬಂದು ಮಾಡುವುದಿಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.

Leave a Comment