Gruhalakshmi Yojana: ಈ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಹಣ ಬರಲ್ಲ.! ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ!
Gruhalakshmi Yojana: ನಮಸ್ಕಾರ ಎಲ್ಲಾ ಕರ್ನಾಟಕದ ಜನತೆಗೆ, ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯು ಜಾರಿಯಾಗಿ ಸುಮಾರು ವರ್ಷಗಳ ಕಳೆದಿದೆ ಇಷ್ಟು ವರ್ಷಗಳಲ್ಲಿ ಮಹಿಳೆಯರಿಗೆ ಸಾಕಷ್ಟು ಸಹಾಯಕವಾಗಿದ್ದ ಗೃಹಲಕ್ಷ್ಮಿ ಯೋಜನೆಯು ದಿಡೀರನೆ ಮಹಿಳೆಯರಿಗೆ ಆತಂಕವನ್ನು ಉಂಟುಮಾಡಿದೆ. ಅಂದರೆ ಗೃಹಲಕ್ಷ್ಮಿ ಯೋಜನೆ ಸದುಪಯೋಗ ಪಡೆದುಕೊಳ್ಳಲು ಮುಖ್ಯವಾಗಿ ರೇಷನ್ ಕಾರ್ಡ್ ಬೇಕು, ರಾಜ್ಯ ಸರ್ಕಾರ ರೇಷನ್ ಕಾರ್ಡ್ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದೆ. ಇದರ ಇನ್ನೂ ಹೆಚ್ಚಿನ ಮಾಹಿತಿ ಕೆಳಗಡೆ ನೀಡಲಾಗಿದೆ.
ಹೌದು ಕರ್ನಾಟಕ ರಾಜ್ಯದಲ್ಲಿ ದಿಡೀರನೆ 10 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಯಾವ ಕಾರಣಕ್ಕಾಗಿ ರೇಷನ್ ಕಾರ್ಡ್ಗಳನ್ನು ರದ್ದು ಮಾಡಲಾಗಿದೆ ಎಂದು ಜನರು ಪ್ರಶ್ನೆ ಮಾಡಿದಾಗ ರಾಜ್ಯ ಸರ್ಕಾರವು ತೆರಿಗೆ ಮತ್ತು ಜಿಎಸ್‌ಟಿ ಪಾವತದಾರರ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ.
ಬಿಪಿಎಲ್ ರೇಷನ್ ಕಾರ್ಡ್ ರದ್ದು:
ಬಿಪಿಎಲ್ ರೇಷನ್ ಕಾರ್ಡ ಬಡತನ ರೇಖೆಗಿಂತ ಕೆಳಗಡೆ ಇರುವ ಜನರಿಗೆ ಮಾತ್ರ ದೊರಕಲಿದೆ ಮತ್ತು ಗೃಹಲಕ್ಷ್ಮಿ ನಿಯಮದ ಪ್ರಕಾರ ಐಟಿ ಜಿ ಎಸ್ ಟಿ ಮತ್ತು ತೆರಿಗೆ ಪಾವತಿದಾರರಿಗೆ ಗೃಹಲಕ್ಷ್ಮಿ ಹಣ ನೀಡುವುದಿಲ್ಲ ಎಂಬ ನಿಯಮ ಇದೆ. ಆದರೂ ಮಹಿಳೆಯರು ನಾವು ತೆರಿಗೆ ಪಾವತಿದಾರರು ಅಲ್ಲವೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ದೃಢೀಕರಣ ಪತ್ರವನ್ನು ನೀಡಿದ್ದು ಆದರೂ ಕೂಡ ಗೃಹಲಕ್ಷ್ಮಿ ಹಣ ಇನ್ನೂ ಪಾವತಿ ಆಗಿಲ್ಲ.
ಮಹಿಳೆಯರು ತೆರಿಗೆ ಪಾವತಿದಾರರಾಗಿದ್ದರು 1.78 ಲಕ್ಷ ಮಹಿಳೆಯರು ನೊಂದಾಯಿಸಿಕೊಂಡಿದ್ದು ಪ್ರತಿ ತಿಂಗಳು 2000 ಹಣವನ್ನು ಪಡಿತಿದ್ದಾರೆ ಎಂದು ರಾಜ್ಯ ಸರ್ಕಾರದಿಂದ ಮಾಹಿತಿ ತಿಳಿದು ಬಂದಿದೆ. ಇದರಿಂದಾಗಿ ಗೃಹಲಕ್ಷ್ಮಿ ಮಹಿಳೆಯರು ಹಣ ಬರದೇ ಇರುವ ಕಾರಣದಿಂದ ಇದೀಗ ವಂಚಿತರಾಗಿದ್ದಾರೆ.
ಇದರಿಂದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಇನ್ನು ಹೆಚ್ಚಿನ ಕ್ರಮವನ್ನು ಕೈಗೊಂಡಾಗ ತೆರಿಗೆದಾರರಿಗೆ ಯಾವುದೇ ರೀತಿಯಾಗಿ ಗೃಹಲಕ್ಷ್ಮಿ ಹಣವನ್ನು ಕೊಡುವುದಿಲ್ಲ ಎಂದು ಹೇಳಿದ್ದಾರೆ.
ರೇಷನ್ ಕಾರ್ಡ್ ರದ್ದಾದ ಪಟ್ಟಿ ಲಿಸ್ಟ್ ನೋಡಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ರೇಷನ್ ಕಾರ್ಡ್ ರದ್ದಾದ ಪಟ್ಟಿ ಲಿಸ್ಟ್ ನಲ್ಲಿ ನಿಮ್ಮ ಹೆಸರು ಕೂಡ ಚೆಕ್ ಮಾಡಿಕೊಳ್ಳಬಹುದು.