Gruhalakshmi Scheme Update: ಗೃಹಲಕ್ಷ್ಮಿ ಯೋಜನೆಯ ₹2,000 ರೂ. ಹಣ ಇನ್ನೂ ಬಂದಿಲ್ಲಾ ಅಂದ್ರೆ.!! ಕೂಡಲೇ ಈ ಕೆಲಸ ಮಾಡಿ ಹಣ ಪಡೆದುಕೊಳ್ಳಿ.!!
Gruhalakshmi Scheme Update:ಎಲ್ಲಾ ಕರ್ನಾಟಕದ ಜನತೆಗೆ ನಮಸ್ಕಾರ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ, ಅದರಲ್ಲಿ ಕಾಂಗ್ರೆಸ್ ಸರ್ಕಾರವೂ ಜಾರಿಗೊಳಿಸಿದ ಯೋಜನೆಗಳಲ್ಲಿ ಈ ಗೃಹಲಕ್ಷ್ಮಿ ಯೋಜನೆಯೂ ಸಹ ಒಂದು ಈ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ನಮ್ಮ ರಾಜ್ಯದ ಪ್ರತಿ ಮಹಿಳೆಯರಿಗೆ ತಲಾ ₹2,000 ರೂ. ಹಣವನ್ನು ನೇರವಾಗಿ ಪ್ರತಿ ತಿಂಗಳೂ ಕೂಡ ಜಮಾ ಮಾಡುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾತನಾಡಿ, 10ನೇ ಕಂತಿನ ವರೆಗೂ ಎಲ್ಲಾ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ತಲುಪಿದೆ, ಆದರೆ ಕೆಲವು ಮಹಿಳೆಯರಿಗೆ ಈ ಗುಹಲಕ್ಷ್ಮಿ ಯೋಜನೆಯ ಹಣವೂ ಇನ್ನೂ ಕೂಡ ಬಂದಿಲ್ಲ.
Table of Contents
ಇದಲ್ಲದೆ, ಗೃಹಲಕ್ಷ್ಮಿ ಯೋಜನೆಯ ಜೂನ್ ಮತ್ತು ಜುಲೈ ತಿಂಗಳ ಹಣವನ್ನು ಇನ್ನೂ ಕೂಡ ಫಲಾನುಭಿಗಳ ಖಾತೆಗೆ ಬಿಡುಗಡೆಯಾಗಿಲ್ಲ. ಎರಡು ಮೂರು ದಿನಗಳಲ್ಲಿ ಹಣ ಎಲ್ಲಾ ಫಲಾನುಭವಿಗಳ ಖಾತೆಗೆ ಬರುತ್ತದೆ ಎಂದು ಅವರು ಸ್ಪಷ್ಟಪಡಿಸಿದರು, ಹಿಂದಿನ ಎಲ್ಲಾ ಕಂತನ್ನು ಈಗಾಗಲೇ ಜಮಾ ಮಾಡಲಾಗಿದೆ, ಪ್ರಸ್ತುತ ಈಗ ಯಾವೆಲ್ಲಾ ಮಹಿಳೆಯರಿಗೆ ಗೃಹಲಕ್ಷ್ಮಿ ಹಣವು ಇನ್ನೂ ಸರಿಯಾಗಿ ಬಂದಿಲ್ಲವೋ ಅಂತಹ ಎಲ್ಲಾ ಮಹಿಳೆಯರು ಕೂಡ ಈ ಕೆಲಸವನ್ನು ಮಾಡಬೇಕು ಮತ್ತು ನಿಮ್ಮ ಹಣವನ್ನು ಪಡೆಯಬಹುದು.
Gruhalakshmi Scheme Update: ಗೃಹಲಕ್ಷ್ಮಿ ಯೋಜನೆಯ ₹2,000 ಹಣ ಬರದಿದ್ದರೆ ಅಂತಹ ಫಲಾನುಭಿಗಳು ಏನು ಮಾಡಬೇಕು.?
- ನೀವು ಗೃಹಲಕ್ಷ್ಮಿ ಹಣವನ್ನು ಸ್ವೀಕರಿಸಲು ಬಯಸಿದರೆ, ನೀವು ನಿಮ್ಮ ಪಡಿತರ ಚೀಟಿಯಲ್ಲಿ ಇರುವ ಎಲ್ಲಾ ಸದಸ್ಯರಿಗೆ ಕಡ್ಡಾಯವಾಗಿಯು ಇ-ಕೆವೈಸಿ (E-KYC) ಮಾಡಿಸಿ ಹಾಗೂ ಇದನ್ನು ಪೂರ್ಣಗೊಳಿಸಬೇಕು.
- ಗೃಹಲಕ್ಷ್ಮಿ ಯೋಜನೆಯಲ್ಲಿ ಅಪ್ಲೈ ಮಾಡಿಕೊಂಡಿರುವ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗಳಿಗೆ ಕಡ್ಡಾಯವಾಗಿ ಇ-ಕೆವೈಸಿ (E-KYC) ಪರಿಶೀಲನೆ ಮಾಡಿಸಿ ಆಗಿರದಿದ್ದಾರೆ ಇದನ್ನು ಸಹ ನೀವು ಪೂರ್ಣಗೊಳಿಸಬೇಕಾಗುತ್ತದೆ.
- ನೀವು NPCI ಮ್ಯಾಪಿಂಗ್ ಅನ್ನು ಸಹ ಮಾಡಿಸಿಕೊಳ್ಳಬೇಕು.
- ಹೆಚ್ಚುವರಿಯಾಗಿ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಇ-ಕೆವೈಸಿ (E-KYC) ಮತ್ತು ನಿಮ್ಮ ಆಧಾರ್ ಕಾರ್ಡ್‌ಗಳ ಸೀಡಿಂಗ್ ಸಹ ಮಾಡಿಸಿಕೊಳ್ಳಬೇಕು.
- ನಿಮ್ಮ (Aadhar Card) ಆಧಾರ್ ಕಾರ್ಡ್ ಅನ್ನು ನಿಮ್ಮ ರೇಷನ್ ಕಾರ್ಡ್ (Ration Card) ನೊಂದಿಗೆ ಲಿಂಕ್ ಮಾಡಿಸಿಕೊಳ್ಳಿ.
- ನಿಮ್ಮ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ನೀವು ಪರಿಹರಿಸಿಕೊಳ್ಳಿ.
- ನಿಮ್ಮ ಪ್ರಸ್ತುತ ಮೊಬೈಲ್ ಸಂಖ್ಯೆಯನ್ನು ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಆಗಿದೆಯಾ ಅಥವಾ ಇಲ್ಲವಾ ಎಂಬುದನ್ನು ಚೆಕ್ ಮಾಡಿಕೊಳ್ಳಿ ಆಗಿರದಿದ್ದಲ್ಲಿ ಲಿಂಕ್ ಮಾಡಿಸಿಕೊಳ್ಳಿ.
- ಈ ಮೇಲಿನ ಇಷ್ಟೆಲ್ಲಾ ಕೆಲಸಗಳನ್ನು ನೀವು ಮಾಡಿಕೊಂಡಿದ್ದೆ ಆದರೆ ನಿಮಗೆ ತಲುಪಬೇಕಾದ ಗೃಹಲಕ್ಷ್ಮಿ ಯೋಜನೆ ಹಣವೂ ಖಂಡಿತಾ ಸಿಕ್ಕೇ ಸಿಗುತ್ತದೆ
ಇತರ ವಿಷಯಗಳು: