ಗೃಹಲಕ್ಷ್ಮಿ ಯೋಜನೆಗೃಹಲಕ್ಷ್ಮಿಯ ನ್ಯೂ ಅಪ್ಡೇಟ್: ಹಲೋ ಸ್ನೇಹಿತರೇ! ಇಂದು ಪುರುಷರ ತರಹ ಮಹಿಳೆಯರು ಕೂಡ ಸಮನರಾಗಿದ್ದು ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ಧಿಯನ್ನು ಕಾಣುತ್ತಿದ್ದಾರೆ ಮಹಿಳೆಯರು. ಅದೇ ರೀತಿ ನಮ್ಮ ಸರಕಾರವೂ ಸಹ ಮಹಿಳೆಯರನ್ನು ಎಂದಿಗೂ ಪ್ರೋತ್ಸಾಹಿಸುತ್ತಲೇ ಬಂದಿದೆ. ಈ ಬಾರಿ ಕಾಂಗ್ರೆಸ್ ಸರಕಾರವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಅದರಲ್ಲಿ ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆ ಈ ಎರಡು ಯೋಜನೆಗಳು ಸಹಾ ಮಹಿಳಾ ಪರವಾದ ಯೋಜನೆಗಳಾಗಿದ್ದು ಮಹಿಳೆಯರಿಗೆ ಈ ಯೋಜನೆಗಳು ಹೆಚ್ಚು ಸಹಾಯಕವಾಗುತ್ತಿದೆ.
ಗೃಹಲಕ್ಷ್ಮಿ ಯೋಜನೆಯ ಹಣ ಇಲ್ಲ ಯಾಕೆ?
ಕರ್ನಾಟಕದಲ್ಲಿ ಹೆಚ್ಚಿನ ಮಹಿಳೆಯರು ಈ ಗೃಹಲಕ್ಷ್ಮಿ ಯೋಜನೆಯ ಸದುಪಯೋಗವನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ ಇನ್ನುಮುಂದೆ ರಾಜ್ಯದ ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮೆಯಾಗುವುದಿಲ್ಲ ಎನ್ನುವ ಸುದ್ದಿಗಳು ಕೇಳಿಬರುತ್ತಿದೆ. ಇದಕ್ಕೆ ಕಾರಣ ಏನೆಂದರೆ ಕೆಲವು ಮಹಿಳೆಯರು ರೇಷನ್ ಕಾರ್ಡ್ ಅನ್ನು ದುರ್ಬಳಕೆ ಮಾಡಿಕೊಂಡು ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ರಾಜ್ಯ ಸರ್ಕಾರಕ್ಕೆ ಗೊತ್ತಾಗಿದೆ. ಕುಟುಂಬದ ಎಲ್ಲಾ ಸದಸ್ಯರು ಒಂದೇ ಮನೆಯಲ್ಲಿ ವಾಸ ಮಾಡುತಿದ್ದರು ಸಹ ನಾಲ್ಕ ಕಿಂತ ಹೆಚ್ಚು ರೇಷನ್ ಕಾರ್ಡ್ ಗಳನ್ನು ಹೊಂದಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ತಿಳಿದು ಬಂದಿದೆ.
ಈಗಾಗಲೇ ಒಂದೇ ಕುಟುಂಬದಲ್ಲಿ ಮತ್ತು ಒಂದೇ ಮನೆಯಲ್ಲಿ ವಾಸಮಾಡುತ್ತಿರುವ ಕುಟುಂಬದವರ ಹೆಚ್ಚು ರೇಷನ್ ಕಾರ್ಡ್ ಗಳನ್ನು ಸಹ ರಾಜ್ಯ ಸರ್ಕಾರವು ರದ್ದು ಮಾಡಿದೆ. ಹೀಗಾಗಿ ಯಾವೆಲ್ಲಾ ಮಹಿಳೆಯರ ರೇಷನ್ ಕಾರ್ಡ್ ರದ್ದು ಆಗಿದೆಯೋ ಅಂತಹ ಮಹಿಳೆಯರಿಗೆ ಈ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವುದಿಲ್ಲ.
ಯೋಜನೆಗಳುನ್ನು ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಕಠಿಣ ಕ್ರಮ:
ಸರ್ಕಾರದಿಂದ ಸಿಗುವ ಗ್ಯಾರಂಟಿ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ಹೀಗೆ ಯಾವುದೇ ರೀತಿಯ ಅನ್ಯ ಮಾರ್ಗವನ್ನು ಹಿಡಿದು ಮೊಸಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಸರ್ಕಾರವು ಎಚ್ಚರಿಕೆ ನೀಡಿದೆ. ಅದೇ ರೀತಿ ನಕಲಿ ರೆಷನ್ ಕಾರ್ಡ್ ಗಳನ್ನು ಸೃಷ್ಟಿ ಮಾಡಿಕೊಂಡು ಗ್ಯಾರಂಟಿ ಯೋಜನೆಗಳಾದ ಗೃಹ ಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯ ಲಾಭವನ್ನು ಪಾಡೆದುಕೊಳ್ಳುತ್ತಿರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರವು ಈಗಾಗಲೇ ಮಾಹಿತಿ ನೀಡಿ ಎಚ್ಚರಿಕೆ ನೀಡಿದೆ.
ಗೃಹಲಕ್ಷ್ಮಿ ಯೋಜನೆಯ 11 ನೇ ಮತ್ತು 12 ನೇ ಕಂತಿನ ಹಣದ ಬಗ್ಗೆ ಮಾಹಿತಿ:
ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಹಣ 10 ನೇ ಕಂತಿನ ಹಣ ಹೆಚ್ಚಿನ ಮಹಿಳೆಯರ ಖಾತೆಗೆ ಬಿಡುಗಡೆ ಯಾಗಿದ್ದು ಆದೇ ರೀತಿ 11 ನೇ ಕಂತಿನ ಹಣವೂ ಸಹ ಇದೇ ತಿಂಗಳ ಒಳಗಾಗಿ ಬಿಡುಗೆಯಾಗುತ್ತದೆ. ಅದೇ ರೀತಿ ಗೃಹಲಕ್ಷ್ಮಿ ಯೋಜನೆಯ 12 ನೇ ಕಂತಿನ ಹಣವು ಸಹ ರಾಜ್ಯ ಸರಕಾರ ಬಿಡುಗಡೆ ಮಾಡಿದ್ದು ಶೀಘ್ರವಾಗಿ ಎಲ್ಲಾ ಫಲಾನುಭವಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮೆ ಯಾಗಲಿದೆ.
ದಾಖಲೆ ಸರಿ ಇಲ್ಲದಂತಹ ಮಹಿಳೆಯರು ತಮ್ಮ ಅಗತ್ಯ ದಾಖಲೆಗಳನ್ನು ಸರಿ ಪಡಿಸಿಕೊಂಡು ಮತ್ತೆ ಅರ್ಜಿಯನ್ನು ಸಲ್ಲಿಸಿದಾರೆ ಅಂತಹವರಿಗೂ ಗೃಹಲಕ್ಷ್ಮಿ ಯೋಜನೆಯ ಹಣ ಜಮೆ ಯಾಗಲಿದೆ ಆದ ಕಾರಣ ತಕ್ಷಣ ತಮ್ಮ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಸರಿ ಪಡಿಸಿಕೊಳ್ಳಿ ಮತ್ತು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಮತ್ತೊಮ್ಮೆ ಸಲ್ಲಿಸುವ ಮೂಲಕ ನಿಮ್ಮ ಪಾಲಿನ ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರಲಿದೆ.
ನೋಡಿದರಲ್ಲ ಸ್ನೇಹಿತರೆ ಗೃಹಲಕ್ಷ್ಮೀ ಯೋಜನೆಯ ಹಣ ಪಡೆಯಲು ಯಾವೆಲ್ಲಾ ಷರತ್ತುಗಲು ಮಹಿಳೆಯರಿಗೆ ಇವೇ ಎಂದು ರಾಜ್ಯ ಸರ್ಕಾರವು ಈಗಾಗಲೇ ಎಚ್ಚರಿಕೆ ನೀಡುವುದರ ಮೂಲಕ ಯೋಜನೆಯ ಹಣವನ್ನು ದುರ್ಬಳಕೆ ಮಾಡಿಕೊಂಡಿರುವವರ ಮೇಲೆ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಆದ್ದರಿಂದ ನೀವು ಯಾವುದೇ ರೀತಿಯ ಅನ್ಯ ಮಾರ್ಗವನ್ನು ಅನುಸರಿಸಬೇಡಿ.
ಈ ಲೇಖನವನ್ನು ಇಲ್ಲಿಯವರೆಗೆ ಓದಿದಕ್ಕೆ ತಮಗೆಲ್ಲರಿಗೂ ಸಹ ಧನ್ಯವಾದಗಳು ಸ್ನೇಹಿತರೆ, ಮುಂದಿನ ಒಂದು ಉನ್ನತ ಮಾಹಿತಿಯೊಂದಿಗೆ ಹೀಗೆ ಸಿಗೋಣ.