ಗೃಹಲಕ್ಷ್ಮಿ ಯೋಜನೆಯ ಜುಲೈ ಮತ್ತು ಆಗಸ್ಟ್ ತಿಂಗಳ 4000 ಹಣವನ್ನು ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ನಿಮ್ಮ ಮಾಡಲಾಗಿದೆ! Gruhalakshmi Scheme Amount Credited

ಗೃಹಲಕ್ಷ್ಮಿ ಯೋಜನೆಯ ಜುಲೈ ಮತ್ತು ಆಗಸ್ಟ್ ತಿಂಗಳ 4000 ಹಣವನ್ನು ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ನಿಮ್ಮ ಮಾಡಲಾಗಿದೆ! Gruhalakshmi Scheme Amount Credited

ಸ್ನೇಹಿತರೆ ತಮ್ಮೆಲ್ಲರಿಗೂ ಈ ಒಂದು ಲೇಖನಕ್ಕೆ ಸ್ವಾಗತ, ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಎಲ್ಲಾ ಗೃಹಲಕ್ಷ್ಮಿ ಮಹಿಳಾ ಫಲಾನುಭವಿಗಳಿಗೆ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ, ಅದೇನೆಂದರೆ ಗೃಹಲಕ್ಷ್ಮಿ ಯೋಜನೆಯ 12ನೇ ಮತ್ತು 13ನೇ ಕಂತಿನ 4000 ಸಾವಿರ ರೂಪಾಯಿ ಹಣವನ್ನು ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಿದ್ದಾರೆ. ಹೌದು ಸ್ನೇಹಿತರೆ ಇದು ನಮ್ಮ ರಾಜ್ಯದ ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಒಂದು ಸಿಹಿ ಸುದ್ದಿ ಅಂತಲೇ ಹೇಳಬಹುದು. ಈ ಒಂದು ಮಾಹಿತಿಯ ಸಂಪೂರ್ಣ ವಿವರವನ್ನು ನಾವು ಈ ಕೆಳಗಿನ ಲೇಖನದಲ್ಲಿ ನೀಡಿದ್ದೇವೆ ಪೂರ್ತಿಯಾಗಿ ಓದಿರಿ.

Gruhalakshmi Scheme 12th & 13th Installment Amount Credited

ಹೌದು ಸ್ನೇಹಿತರೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪ್ರಸ್ತುತ ಅಕ್ಟೋಬರ್ ತಿಂಗಳ ಪ್ರಾರಂಭದಲ್ಲಿ ದಸರಾ ಹಬ್ಬದ ಪ್ರಯುಕ್ತ ರಾಜ್ಯದ ಎಲ್ಲಾ ಗೃಹಲಕ್ಷ್ಮಿ ಮಹಿಳಾ ಫಲಾನುಭವಿಗಳಿಗೆ ಜುಲೈ ತಿಂಗಳ ಹಾಗೂ ಆಗಸ್ಟ್ ತಿಂಗಳ ಕಂತಿನ ಹಣವನ್ನು ಎಲ್ಲರ ಖಾತೆಗಳಿಗೆ ಜಮಾ ಮಾಡುವುದಾಗಿ ಸಮಾವೇಶ ಒಂದರಲ್ಲಿ ಹೇಳಿದ್ದರು. ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ರವರು ಹೇಳಿದ ಹಾಗೆ ದಸರಾ ಹಬ್ಬದ ಪ್ರಯುಕ್ತ ರಾಜ್ಯದ ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಗೃಹಲಕ್ಷ್ಮಿ ಯೋಜನೆಯ 12ನೇ ಮತ್ತು 13ನೇ ಕಂತಿನ ನಾಲ್ಕು ಸಾವಿರ ರೂಪಾಯಿಗಳನ್ನು ಜಮಾ ಮಾಡಲಾಗಿದೆ.

Gruhalakshmi Scheme Amount Credited
Gruhalakshmi Scheme Amount Credited

ನಮ್ಮ ಕರ್ನಾಟಕ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯಿಂದ ಎಲ್ಲ ಮಹಿಳಾ ಫಲಾನುಭವಿಗಳು ವಿವಿಧ ರೀತಿಯ ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ ಕೆಲವರು ತಮ್ಮ ಮನೆಗೆ ಬಳಸುವ ವಸ್ತುಗಳನ್ನು ಖರೀದಿ ಮಾಡಿದರೆ, ಇನ್ನೂ ಕೆಲವು ಮಹಿಳೆಯರು ತಮಗಾಗಿ ಚಿನ್ನವನ್ನು ಖರೀದಿಸಿ ಇಟ್ಟುಕೊಂಡಿದ್ದಾರೆ. ಹಾಗೂ ಇನ್ನೂ ಮಹಿಳೆಯರ ಮನೆಯಲ್ಲಿ ಅವರ ಮಕ್ಕಳು ಅವರ ಶಾಲಾ ಶುಲ್ಕವನ್ನು ಕಟ್ಟಲು ಬಳಸಿಕೊಂಡಿದ್ದಾರೆ. ಈ ರೀತಿ ಹಲವು ಪ್ರಯೋಜನಗಳನ್ನು ಈ ಒಂದು ಲಕ್ಷ್ಮಿ ಯೋಜನೆಯಿಂದ ಗೃಹಲಕ್ಷ್ಮಿ ಯೋಜನೆ ಎಲ್ಲಾ ಫಲಾನುಭವಿಗಳು ಪಡೆದುಕೊಂಡಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ 12ನೇ ಹಾಗೂ 13ನೇ ಕಂತಿನ ಹಣ ಜಮಾ ಆಗದೆ ಇರುವವರು ಏನು ಮಾಡಬೇಕು?

ಗೃಹಲಕ್ಷ್ಮಿ ಯೋಜನೆಯ ಕೆಲವು ಫಲಾನುಭವಿಗಳಿಗೆ ಇನ್ನೂ ಕೂಡ ಜುಲೈ ಮತ್ತು ಆಗಸ್ಟ್ ಕಂತಿನ ಹಣ ಬಂದಿಲ್ಲ ಅಂತಹವರು ಸ್ವಲ್ಪ ತಾಳ್ಮೆಯಿಂದ ಕಾಯಬೇಕಾಗುತ್ತದೆ. ಏಕೆಂದರೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ ಹಾಗೆ ಅವರು ಡಿಬಿಟಿ ಪುಶ್ ಮಾಡಿದ ಮೇಲೆ ಎಲ್ಲಾ ಮಹಿಳೆಯರ ಖಾತೆಗಳಿಗೆ ಹಂತ ಹಂತವಾಗಿ ಹಣವು ಜಮಾ ಆಗಲು ತಡವಾಗುತ್ತದೆ, ಈ ಒಂದು ಕಾರಣದಿಂದ ಎಲ್ಲಾ ಮಹಿಳೆಯರು ಸಮಾಧಾನದಿಂದ ಹಾಗೂ ತಾಳ್ಮೆಯಿಂದ ತಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿಕೊಳ್ಳುತ್ತಾ ಇರಬೇಕು. ಇನ್ನು ಕೆಲವೇ ದಿನಗಳಲ್ಲಿ ಎಲ್ಲಾ ಫಲಾನುಭವಿ ಮಹಿಳೆಯರ ಖಾತೆಗಳಿಗೆ ಹಣವು ಜಮಾ ಆಗುತ್ತದೆ.

Leave a Comment