ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯ 11ನೇ ಕಂತಿನ ₹2000 ಹಣ ಬಿಡುಗಡೆಯಾಗಿದ್ದು, ಈಗಾಗಲೇ ಹಲವು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಹಣ DBT ಮೂಲಕ ನೇರವಾಗಿ ಬಿಡುಗಡೆ ಮಾಡಲಾಗಿದೆ. ರಾಜ್ಯದ ಲಕ್ಷಾಂತರ ಮಹಿಳೆಯರು ಈ ಯೋಜನೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ ಮತ್ತು ಯೋಜನೆಯ ಹಣವನ್ನು ಬಳಸಿಕೊಂಡು ಅಗತ್ಯ ವಸ್ತುಗಳನ್ನು ಖರೀದಿಸಿರುವ ಹಲವಾರು ವೀಡಿಯೊಗಳನ್ನು ನೀವು ಸಾಮಾಜಿಕ ಮಾಧ್ಯಮದಲ್ಲಿ ನೋಡಿರಬಹುದು. ಜೂನ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ₹2000 ಹಣವನ್ನು ಈಗಾಗಲೇ ಮಹಿಳೆಯರಿಗೆ ಠೇವಣಿ ಮಾಡಲಾಗಿದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ಕೆಳಗೆ ಓದಿರಿ.
Table of Contents
ಗೃಹಲಕ್ಷ್ಮಿ ಯೋಜನೆಯ ₹2000 ಹಣ ಖಾತೆಗಳಿಗೆ ಜಮಾ!
ಈಗಾಗಲೇ ಜುಲೈ ತಿಂಗಳಿಗೆ 26.65 ಲಕ್ಷ ಗೃಹಲಕ್ಷ್ಮಿ ಯೋಜನೆಯ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜೂನ್ ತಿಂಗಳ ₹2000 ಹಣವು ಜಮಾ ಆಗಿದೆ. ಮೊದಲ ಹಂತದಲ್ಲಿ ಈ ಎಲ್ಲಾ ಜಿಲ್ಲೆಗಳಲ್ಲಿ ₹2000 ಹಣವನ್ನು ಜಮಾ ಮಾಡಲಾಗಿದೆ. ಆ ಎಲ್ಲಾ ಜಿಲ್ಲೆಗಳ ಲಿಸ್ಟ್ ಕೆಳಗಡೆ ನೀಡಲಾಗಿದೆ.
ಗೃಹಲಕ್ಷ್ಮಿ ₹2000 ಹಣ ಜಮಾ ಆದ ಜಿಲ್ಲೆಗಳ ಪಟ್ಟಿ!
ಬೀದರ್, ಬೆಳಗಾವಿ, ಕಲಬುರಗಿ, ಗದಗ, ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಹಾವೇರಿ, ಯಾದಗಿರಿ, ಬೆಂಗಳೂರು, ಚಿತ್ರದುರ್ಗ, ಕೋಲಾರ, ಶಿವಮೊಗ್ಗ, ರಾಮನಗರ, ಚಿಕ್ಕೋಡಿ ಮತ್ತು ಉಡುಪಿ ಈ ಎಲ್ಲಾ ಜಿಲ್ಲೆಗಳ ಮಹಿಳಾ ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗಿದೆ.
ಪ್ರಸ್ತುತ ಹಾವೇರಿ ಜಿಲ್ಲೆಯಲ್ಲಿ ಸುಮಾರು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣವು ಜಮೆಯಾಗಿದೆ. ತಮ್ಮ 11 ನೇ ಕಂತಿನ ಹಣದ ಸ್ಥಿತಿಯನ್ನು ಖಚಿತಪಡಿಸಿದ ಮಹಿಳೆಯರು ಸಂತೋಷವನ್ನೂ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮ ಖಾತೆಗೆ ಇನ್ನೂ ಹಣ ಬಂದಿಲ್ಲವಾದರೆ, ಇನ್ನೂ ಒಂದು ವಾರದೊಳಗೆ ಅದು ಜಮಾ ಆಗುವಂತ ನಿರೀಕ್ಷೆಯಿದೆ ಮತ್ತು ನಮ್ಮ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಮಹಿಳೆಯರ ಖಾತೆಗಳಿಗೆ ಕ್ರಮೇಣ ಜಮಾ ಮಾಡಲಾಗುತ್ತದೆ.
ಕಾಂಗ್ರೆಸ್ ಪಕ್ಷದ ಒಂದು ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಕೆಲ ತಾಂತ್ರಿಕ ದೋಷಗಳಿಂದ 11ನೇ ಕಂತಿನ ಹಣ ಜಮಾ ಆಗದೆ ಇತ್ತು, ಆದರೆ ಈಗ ಎಲ್ಲವೂ ಸರಿಹೋಗಿದ್ದು ಒಟ್ಟು ₹2000 ರೂ. ಎಲ್ಲರ ಖಾತೆಗೆ ಜಮಾ ಆಗುತ್ತದೆ ಎಂದರು. ಹಾಗೂ ಈ ಬಗ್ಗೆ ಯಾರೂ ಕೂಡ ಆತಂಕ ಪಡಬೇಕಾಗಿಲ್ಲ ಎಂದರು.
ಹಣ ಜಮಾ ಆದ ಸ್ಟೇಟಸ್ ಅನ್ನು ಈ ರೀತಿ ಪರಿಶೀಲಿಸಿ!
ನಿಮ್ಮ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸುವ ಮೂಲಕ ನೀವು ಗೃಹಲಕ್ಷ್ಮಿ ಹಣದ ಠೇವಣಿ ಸ್ಟೇಟಸ್ ಅನ್ನು ಪರಿಶೀಲಿಸಬಹುದು ಅಥವಾ DBT Karnataka ಆ್ಯಪ್ ನ ಮೂಲಕ ಸಹ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸುವ ಮೂಲಕ ಎಲ್ಲಾ ಠೇವಣಿ ಹಣದ ಸ್ಥಿತಿಯನ್ನು ನೀವು ಪರಿಶೀಲಿಸಬಹುದು. ಆ್ಯಪ್ ಡೌನ್ಲೋಡ್ ಮಾಡಿ.