Gruhalakshmi : ಗೃಹಲಕ್ಷ್ಮಿ ಯೋಜನೆಯ ಜುಲೈ – ಆಗಸ್ಟ್ ತಿಂಗಳ ₹4,000 ಹಣವೂ ಈ ವಾರದೊಳಗೆ ಮಹಿಳೆಯರ ಖಾತೆಗೆ ಜಮಾ.!

Gruhalakshmi : ನಮಸ್ಕಾರ ಗೆಳೆಯರೇ, ಇಂದಿನ ಹೊಸ ಲೇಖನಕ್ಕೆ ಸುಸ್ವಾಗತ. ಇಂದು ಈ ಲೇಖನದಲ್ಲಿ ಹೇಳುವುದೇನೆಂದರೆ ನಿಮಗೆಲ್ಲರಿಗೂ ತಿಳಿದಿರುವಂತೆ ಕರ್ನಾಟಕ ಸರ್ಕಾರವು ಹಿಂದಿನ ವರ್ಷ ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ನಮ್ಮ ರಾಜ್ಯದಲ್ಲಿ ಐದು 5 ಖಾತರಿ ಯೋಜನೆಗಳನ್ನು ಪರಿಚಯಿಸಿದೆ. ಈ ಐದು ಖಾತರಿ ಯೋಜನೆಗಳಲ್ಲಿ, ಗೃಹಲಕ್ಷ್ಮಿ ಯೋಜನೆಯು ಅತ್ಯಂತ ಪ್ರಮುಖವಾದುದು, ಈ ಯೋಜನೆಯಡಿಯಲ್ಲಿ, ರಾಜ್ಯ ಸರ್ಕಾರವು ನಮ್ಮ ಜಿಲ್ಲೆಯ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಿಂಗಳಿಗೆ 2000 ರೂ. ಗಳನ್ನು ಜಮಾ ಮಾಡುವುದಾಗಿ ತಿಳಿಸಿದ್ದರು.

ಅದರಂತೆ ಇದುವರೆಗೆ 11 ಕಂತುಗಳನ್ನು ರಾಜ್ಯದ ಮಹಿಳೆಯರ ಖಾತೆಗೆ ಒಟ್ಟು 22,000 ರೂ. ಗಳು ಜಮಾ ಆಗಿವೆ, ಆದರೆ ಈಗ ಸರ್ಕಾರವು ಉಳಿದಿರುವ ಮುಂದಿನ 12 ಮತ್ತು 13 ನೇ ಕಂತಿನ ಹಣವನ್ನು ಜಮಾ ಮಾಡುವ ಬಗ್ಗೆ ಒಂದು ಅಪ್ಡೇಟ್ ಅನ್ನು ಬಿಡುಗಡೆ ಮಾಡಿದೆ. ಕೆಳಗಿನ ಸಂಪೂರ್ಣ ವಿವರಗಳನ್ನು ಓದರೇ ಪೂರ್ತಿ ಮಾಹಿತಿ ತಿಳಿಯುತ್ತದೆ.

ಜುಲೈ ಮತ್ತು ಆಗಸ್ಟ್‌ 4000 ಹಣವನ್ನು ಯಾವಾಗ ಜಮಾ ಮಾಡಲಾಗುತ್ತದೆ?

ಸ್ನೇಹಿತರೇ, ಮೂಲಗಳಿಂದ ಬಂದ ಮಾಹಿತಿಯಂತೆ, ನಮ್ಮ ರಾಜ್ಯ ಸರ್ಕಾರವು ಆಗಸ್ಟ್ ತಿಂಗಳ ಹಣವನ್ನು ಎಲ್ಲಾ ಅರ್ಹ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ರೂ 2,000 ವನ್ನೂ ಈ ತಿಂಗಳ ಕೊನೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ ಮತ್ತು ಈ ಜುಲೈ ತಿಂಗಳಿಗೆ ರೂ 2,000 ಬಾಕಿ ಮೊತ್ತವನ್ನು ಸಹ ಇದರ ಜೊತೆಗೆ ಬಿಡುಗಡೆ ಮಾಡಲಾಗುತ್ತದೆ. ಈ ತಿಂಗಳ ಕೊನೆಯಲ್ಲಿ ಒಟ್ಟು 4,000 ರೂ. ಗಳನ್ನು ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಈ ಎಲ್ಲಾ ಜಿಲ್ಲೆಗಳಿಗೆ ಜುಲೈ ಮತ್ತು ಆಗಸ್ಟ್ ನ 4,000 ರೂ.ಗಳನ್ನು ಬಿಡುಗಡೆ ಮೊದಲು ಮಾಡಲಾಗುತ್ತದೆ.

  • ಬೆಂಗಳೂರು
  • ತುಮಕೂರು
  • ಬಳ್ಳಾರಿ
  • ಕೋಲಾರ
  • ಯಾದಗಿರಿ
  • ಉಡುಪಿ
  • ಚಾಮರಾಜನಗರ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ಹಾವೇರಿ
  • ಬೀದರ್
  • ಮಂಡ್ಯ
  • ಮೈಸೂರು
  • ಚಿತ್ರದುರ್ಗ
  • ಕೊಡಗು

ಮೇಲೆ ತಿಳಿಸಿದ ಎಲ್ಲಾ ಜಿಲ್ಲೆಗಳಿಗೆ ಮೊದಲು ಜುಲೈ ಮತ್ತು ಆಗಸ್ಟ್ ತಿಂಗಳ ಕಂತಿನ 4000 ರೂ. ಹಣವನ್ನು ರಾಜ್ಯದ ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ.

Leave a Comment