Gruhalakshmi: ಗೃಹಲಕ್ಷ್ಮಿ ಯೋಜನೆಯ 11ನೇ & 12ನೇ ಕಂತಿನ DBT ಹಣ ಬಿಡುಗಡೆಗೆ.! ಫಲಾನುಭಿಗಳು ತಮ್ಮ ಮೊಬೈಲ್ ನಲ್ಲಿ ಈ ರೀತಿ ಪರಿಶಿಳಿಸಿಕೊಳ್ಳಿ.!

Gruhalakshmi: ಗೃಹಲಕ್ಷ್ಮಿ ಯೋಜನೆಯ ಮಹಿಳಾ ಫಲಾನುಭವಿಗಳು 11 & 12ನೇ ಕಂತಿನ ಗೃಹಲಕ್ಷ್ಮಿ ಹಣದ ಪಾವತಿಗಾಗಿ ಕಾಯುತ್ತಿದ್ದಾರೆ. 11 ಮತ್ತು 12 ನೇ ಕಂತಿನ ಹಣ ₹4,000 ರೂ. ಅನ್ನು ಡಿಬಿಟಿ ಮೂಲಕ ಫಲಾನುಭವಿಯ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಜನಾಂದೋಲನ ಸಮಾವೇಶದಲ್ಲಿ ಭಾಗವಹಿಸಿ ಮಾಹಿತಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar), ಇಂದಿನಿಂದ ಗೃಹಲಕ್ಷ್ಮಿ ಯೋಜನೆಯ ಹಣ ಎಲ್ಲಾ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗಲಿದೆ ಎಂದು ತಿಳಿಸಿದರು.

ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ₹4,000 ರೂ. ಇಂದಿನಿಂದ ಮಹಿಳೆಯರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂದು ಹೇಳಿದರು. ಈಗ ಫಲಾನುಭವಿಗಳು ತಮ್ಮ ಮನೆಯಲ್ಲಿ ಕುಳಿತು ತಮ್ಮ ಮೊಬೈಲ್ ಫೋನ್‌ನಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣದ ಜಮಾ ಆಗಿರುವುದನ್ನು ಪರಿಶೀಲಿಸಬಹುದು. ಇನ್ನೂ ಒಂದು ವಾರದೊಳಗೆ ಗೃಹಲಕ್ಷ್ಮಿ ಹಣದ 11 ಮತ್ತು 12 ನೇ ಕಂತಿನ ಹಣ ಒಟ್ಟಾಗಿ ₹4,000 ರೂ ಖಾತೆಗೆ ತಲುಪುತ್ತದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Google Pay Personal Loan: ಗೂಗಲ್ ಪೇ ತನ್ನ ಗ್ರಾಹಕರಿಗೆ ₹ 50,000 ವರೆಗೆ ಸಾಲವನ್ನು ನೀಡುತ್ತಿದೆ, ಹೀಗೆ ಅರ್ಜಿ ಸಲ್ಲಿಸಿ.!

Gruhalakshmi: ಗೃಹಲಕ್ಷ್ಮಿ ಹಣ DBT ಸ್ಟೇಟಸ್ ಅನ್ನು ಪರಿಶೀಲಿಸುವ ವಿಧಾನ.?

  1. ಮೊದಲು, ನಿಮ್ಮ ಫೋನ್‌ನಲ್ಲಿ ಪ್ಲೇ ಸ್ಟೋರ್ ತೆರೆಯಿರಿ.
  2. ಮುಂದಿನ ಹಂತದಲ್ಲಿ, ಪ್ಲೇ ಸ್ಟೋರ್‌ನಿಂದ ಡಿಬಿಟಿ ಕರ್ನಾಟಕ (DBT) ಎಂಬ ಆ್ಯಪ್/ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.
  3. ಡೌನ್‌ಲೋಡ್ ಮಾಡಿದ ಆ್ಯಪ್ ಅನ್ನು ತೆರೆಯಿರಿ.
  4. ನಂತರ ಆ ಅಪ್ಲಿಕೇಶನ್‌ನಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
  5. ಮುಂದೆ, ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ನಿಮ್ಮ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. ಇದನ್ನು ಅಲ್ಲಿ ನಮೂದಿಸಿ.
  6. ಮುಂದೆ ನೀವು 4-ಅಂಕಿಯ ಕೋಡ್ (m-PIN) ಅನ್ನು ರಚಿಸಬೇಕಾಗಿದೆ.
  7. ನಂತರ ನೀವು ಅಲ್ಲಿ ಬರುವ ಮುಖಪುಟದಲ್ಲಿ ಗೃಹಲಕ್ಷ್ಮಿ ಯೋಜನೆ ಎಲ್ಲಾ ಕಂತಿನ ಹಣ ಮತ್ತು ಅನ್ನಭಾಗ್ಯ ಯೋಜನೆ ನಿಧಿಯ ಹಣದ ಬಗ್ಗೆ ಎಲ್ಲಾ ವಿವರಗಳನ್ನು ಅಲ್ಲಿ ನೋಡಿಕೊಳ್ಳಬಹುದು.

ಇದನ್ನೂ ಓದಿ: Jio Recharge plans: ಜಿಯೋ  ಸಿಮ್ ಬಳಕೆದಾರರಿಗೆ ಒಳ್ಳೆಯ ಸುದ್ದಿ..! ಅಗ್ಗದ 5G ಡೇಟಾ ಪ್ಲಾನ್ ಬಿಡುಗಡೆ..!

WhatsApp Group Join Now
Telegram Group Join Now

Leave a Comment

error: Don't Copy Bro !!