Gruha Lakshmi Scheme : ಎರಡು ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಸಿಗದೇ ಇದ್ದವರಿಗೆ ಗುಡ್ ನ್ಯೂಸ್ ಇದೆ. ಮಹಿಳೆಯರ ಪ್ರಗತಿಗಾಗಿ ಮತ್ತು ಅಭಿವೃದ್ಧಿಗಾಗಿ ಕಾಂಗ್ರೆಸ್ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ. ಸರ್ಕಾರದ ಈ ಒಂದು ಯೋಜನೆಯ ಮೂಲಕ ಮನೆಯ ಮುಖ್ಯಸ್ಥೆ ಅಂದರೆ ಮನೆಯ ಹಿರಿಯ ಮಹಿಳೆಯ ಖಾತೆಗೆ ಪ್ರತಿ ತಿಂಗಳು ₹2,000 ರೂ. ಹಣ ಜಮೆಯಾಗುತ್ತದೆ. ನೋಂದಾಯಿತ ಮಹಿಳೆಯರಿಗೆ ಇದುವರೆಗೆ 11 ಕಂತುಗಳು ಸರ್ಕಾರದಿಂದ ಬಿಡುಗಡೆಯಾಗಿದ್ದು, ಬಹುತೇಕ ಮಹಿಳೆಯರು ಈ ಯೋಜನೆಯ ಲಾಭ ಪಡೆದಿದ್ದಾರೆ.
ಆದರೆ, ಗೃಹಲಕ್ಷ್ಮಿ ಯೋಜನೆಯ ಹಣ ಎರಡು ತಿಂಗಳಿಂದ ಸರಿಯಾಗಿ ಫಲಾನುಭವಿ ಮಹಿಳೆಯರ ಖಾತೆಗೆ ಜಮೆಯಾಗಿಲ್ಲ ಎಂದು ಮಹಿಳೆಯರು ತಿಳಿಸಿದ್ದಾರೆ. ಚುನಾವಣೆಯ ಕಾರಣ ಹಣ ಜಮಾ ಕೂಡ ವಿಳಂಬವಾಗಿದೆ. ಎರಡು ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಸಿಗದವರಿಗೆ ಸಂತಸದ ಸಿಹಿ ಸುದ್ದಿ ಇದೆ, ಕೊನೆಯವರೆಗೂ ಓದಿ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾದ ಲಕ್ಷ್ಮೀ ಹೆಬ್ಬಾಳ್ಳರ್ ಅವರು ಗೃಹಲಕ್ಷ್ಮಿ ಯೋಜನೆಯ ಕುರಿತುಮಾಹಿತಿ ನೀಡಿದರು.!
ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಒಂದೂ ಕಂತಿನ ಹಣವು ಸಿಕ್ಕಿಲ್ಲಾ. ಕೆಲ ಮಹಿಳೆಯರಿಗೆ ಎರಡು ತಿಂಗಳಿಂದ ಹಣ ಸಿಗದಿರುವುದು ಸಮಸ್ಯೆಯಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾದ ಲಕ್ಷ್ಮೀ ಹೆಬ್ಬಾಳ್ಳರ್ ಅವರು ಮಾತನಾಡಿ, ಮಾರ್ಚ್ 1 ರಂದು ಮಹಿಳೆಯರ ಖಾತೆಗೆ ಹಣ ಜಮಾ ಆಗಿದ್ದು, ಜೂನ್ ತಿಂಗಳ ಹಣವನ್ನು ಈಗಾಗಲೇ ರಾಜ್ಯದ ಖಜಾನೆಗೆ ಜಮಾ ಮಾಡಲಾಗಿದೆ. ಇನ್ನೂ ಸ್ವಲ್ಪ ದಿನಗಳಲ್ಲಿ ಹಣ ವರ್ಗಾವಣೆಯಾಗಲಿದೆ ಎಂದು ಶುಭ ಸುದ್ದಿ ನೀಡಿದರು.
ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯವೆ ಇರುವ ಮಹಿಳೆಯರು ತಮ್ಮ ದಾಖಲೆಗಳನ್ನು ಸರಿಪಡಿಸಿಕೊಂಡು ಮರು ನೋಂದಣಿ ಮಾಡಿಕೊಳ್ಳಬಹುದು. ತಾಂತ್ರಿಕ ಸಮಸ್ಯೆಗಳಿಂದಾಗಿ, ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿಲ್ಲಾ. ಇನ್ನೂ ಕೆಲವರಿಗೆ ಆಧಾರ್ ಕಾರ್ಡ್ ಲಿಂಕ್ ಮಾಡದ ಕಾರಣ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುತ್ತಿಲ್ಲ. ನಿಮ್ಮ ಹೆಸರಿನಲ್ಲಿ 3 ಅಥವಾ 4 ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ, ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುವುದಿಲ್ಲ.
ಆದ್ದರಿಂದ, 4 ಅಥವಾ 5 ಬ್ಯಾಂಕ್ ಖಾತೆ ಹೊಂದಿದ್ದರೆ ನೀವು ನಿಮ್ಮ ಯಾವ ಬ್ಯಾಂಕ್ ಖಾತಗೆ ಆಧಾರ್ ಲಿಂಕ್ ಆಗಿದೆಯೋ ಮತ್ತು ಆಧಾರ್ ಸೀಡಿಂಗ್ ಆಗಿದೆಯೋ ಆ ಖಾತೆಯ ವಿವರ ಕೊಟ್ಟು ಇನ್ನೊಮ್ಮೆ ಗೃಹಲಕ್ಷ್ಮಿ ಯೋಜನೆಯಗೆ ನೋಂದಾಯಿಸಿಕೊಳ್ಳಿ. ಮಹಿಳೆಯರು ತಮ್ಮ ಆಧಾರ್ ಕಾರ್ಡ್ ಅನ್ನು ಮತ್ತು ಇ-ಕೆ.ವೈ.ಸಿ, ರೇಷನ್ ಕಾರ್ಡ್ ಲಿಂಕ್, ಹಾಗೂ ಬ್ಯಾಂಕ್ ಖಾತೆ ಲಿಂಕ್ ಇತ್ಯಾದಿಗಳನ್ನು ಪರಿಶೀಲಿಸಿ ನವೀಕರಿಸುವುದು ಕಡ್ಡಾಯವಾಗಿದೆ. ಧನ್ಯವಾದಗಳು.