Gruha Lakshmi: ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇದ್ದಂತಹ ಜುಲೈ ತಿಂಗಳ ₹2,000 ಬಾಕಿ ಉಳಿದಿರುವ ಹಣ ಮತ್ತು ಆಗಸ್ಟ್ ತಿಂಗಳ ₹2,000 ಹಣ, ಒಟ್ಟು ₹4,000 ಹಣ ಸಂದಾಯಕ್ಕೆ ರಾಜ್ಯ ಸರ್ಕಾರವೂ ಸಜ್ಜಾಗಿದೆ. ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜೂನ್ ತಿಂಗಳ ಪೆಂಡಿಂಗ್ ಹಣವೂ ಪಾವತಿಯಾಗಿದ್ದು, ಬಹುತೇಕ ಎಲ್ಲಾ ಜಿಲ್ಲೆಯ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ DBT (Direct Bank Transfer) ಆಗಿದೆ. ಇನ್ನು ಪೆಂಡಿಂಗ್ ಇರುವ ಜುಲೈ ತಿಂಗಳ ಮತ್ತು ಆಗಸ್ಟ್ ತಿಂಗಳ ₹4,000 ಹಣ ಫಲಾನುಭಿಗಳ ಖಾತೆಗಳಿಗೆ ಒಟ್ಟಿಗೆ ಕೈ ಸೇರುವ ಸಾಧ್ಯತೆ ಇದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ ಪೂರ್ತಿಯಾಗಿ ಓದಿರಿ.
Table of Contents
Gruha Lakshmi: ಪೆಂಡಿಂಗ್ ₹2000 ಮತ್ತು ಆಗಸ್ಟ್ ತಿಂಗಳ ₹2000 ಹಣ ಜಮಾ.!
ಹೌದು ಸ್ನೇಹಿತರೇ ಈ ವಿಚಾರದ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು, ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಪ್ರತೀ ತಿಂಗಳೂ ಸುಮಾರು ₹2,400 ಕೋಟಿ ರೂಪಾಯಿ ಹಣವು ಖರ್ಚಾಗುತ್ತಿದೆ. ಇದೀಗ ಹಣ ಜಮಾ ಮಾಡಲು ಇದ್ದ ತಾಂತ್ರಿಕ ದೋಷಗಳೆಲ್ಲವೂ ಸಹ ಈಗ ಬಗೆಹರಿದಿದ್ದು ಎಲ್ಲರ ಖಾತೆಗೆ ಹಣವೂ ತಲುಪಲಿದೆ ಎಂದಿದ್ದಾರೆ.
ಮಂಡ್ಯದಲ್ಲಿ ಹೇಳಿಕೆ ನೀಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಡಿ.ಬಿ.ಟಿ (DBT) ಗೆ ಪುಷ್ ಮಾಡಿ ಈಗ ಮೂರು ದಿನಗಳಾಗಿದೆ. ಹಾಗೂ ಇನ್ನೂ ಒಂದು ವಾರದೊಳಗೆ ಎಲ್ಲಾ ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣವೂ ಸಿಗಬೇಕಿದೆ. ಎಲ್ಲಾ ಬ್ಯಾಂಕ್ ಗಳಿಗೆ ಸಕಾಲಕ್ಕೆ ಯೋಜನೆಯ ಹಣವನ್ನೂ ಕಳುಹಿಸಿರುತ್ತೇವೆ ಎಂದರು, ಮತ್ತು ದೊಡ್ಡ ಮೊತ್ತದ ಹಣ ಆಗಿರುವಂತಹ ಕಾರಣದಿಂದ ವಿಳಂಬ ಆಗುತ್ತಿರುತ್ತದೆ ಎಂದು ಸಚಿವೆ ಹೇಳಿದ್ದಾರೆ.
ಜೂನ್ ತಿಂಗಳ ₹2000 ಪೆಂಡಿಂಗ್ ಕಂತಿನ ಹಣ ಈಗಾಗಲೇ ವರ್ಗಾವಣೆಯಾಗಿದ್ದು, ಜುಲೈ ತಿಂಗಳ ₹2000 ಪೆಂಡಿಂಗ್ ಹಣವೂ ಸಹ ಇನ್ನೆರಡು ವಾರಗಳಲ್ಲಿ ಎಲ್ಲರ ಖಾತೆಗಳಿಗೆ ವರ್ಗಾವಣೆಯಾಗಲಿದೆ. ಆಗಸ್ಟ್ ತಿಂಗಳ ಕಂತಿನ ₹2000 ಹಣ ಕೂಡ ಖಾತೆಗಳಿಗೆ ವರ್ಗಾವಣೆ ಮಾಡುತ್ತೇವೆ ಎಂದಿದ್ದಾರೆ. ಒಂದು ದಿನಕ್ಕೆ ನಮಗೆ ಸುಮಾರು 400 ರಿಂದ 500 ಕರೆಗಳು ಬರುತ್ತಿದ್ದು; ಮಂತ್ರಿಯಾಗಿ ನಾವು ಎಲ್ಲ ಕರೆಗಳಿಗೂ ಸಹ ನಾನು ಉತ್ತರವನ್ನ ನೀಡುತ್ತಿದ್ದೇವೆ ಎಂದು ತಿಳಿಸಿದರು.