Gruha lakshmi: ಎಲ್ಲರಿಗೂ ನಮಸ್ಕಾರ, ಈ ಲೇಖನದ ಮೂಲಕ ಎಲ್ಲರಿಗೂ ಹೇಳಲು ಬಯಸುವ ವಿಷಯ ಏನೆಂದರೆ, ನೀವು ಗೃಹಲಕ್ಷ್ಮಿ ಯೋಜನೆಯ ₹2000 ರೂ. ಹಣವನ್ನು ಜಮಾ ಮಾಡಲಾಗಿದೆಯೇ ಎಂದು ಪರಿಶೀಲಿಸಲು ನೀವು ಅಂದುಕೊಂಡರೆ, ₹2000 ಹಣದ ಸ್ಟೇಟಸ್ ಅನ್ನು ನೀವು ನಿಮ್ಮ ಮೊಬೈಲ್ ಫೋನ್‌ನಲ್ಲಿ ಪರಿಶೀಲಿಸಲು ಸುಲಭವಾದ ಮಾರ್ಗವಾಗಿದೆ, ಅದನ್ನು ನಾವು ತಿಳಿಸಿದ್ದೇವೆ ಕೊನೆ ವರೆಗೂ ತಪ್ಪದೆ ಓದಿರಿ.
ರಾಜ್ಯ ಸರ್ಕಾರವು ಖಾತರಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ಮಹಿಳಾ ಸಬಲೀಕರಣಕ್ಕಾಗಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಮಾಸಿಕವಾಗಿ ₹2,000 ರೂಗಳನ್ನು ನೇರವಾಗಿ ಮನೆ ಮಾಲೀಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತದೆ.
ಗೃಹಲಕ್ಷ್ಮಿ ಯೋಜನೆಯ ₹2000 ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೇ ಅಥವಾ ಇಲ್ಲವಾ ಮತ್ತು 11ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಯ ಖಾತೆಗೆ ಜಮಾ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಅನುಸರಿಸಬೇಕಾದ ಕ್ರಮಗಳೇನು?
ಗೃಹಲಕ್ಷ್ಮಿ ಹಣ ಜಮಾ ಆದ ಬಗ್ಗೆ ಸ್ಟೇಟಸ್ ಅನ್ನು ಈ ಕೆಳಗಿನಂತೆ ಪರಿಶೀಲಿಸಿ:
ಗೃಹಲಕ್ಷ್ಮಿ ಹಣದ ಸ್ಟೇಟಸ್ ಚೆಕ್ ಮಾಡಲು ಮೊದಲು, ನೀವು ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್‌ನಿಂದ “DBT ಕರ್ನಾಟಕ” ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ ಮತ್ತು ಒಮ್ಮೆ ತೆರೆದ ನಂತರ ಆಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಕಿ ಮತ್ತು OTP ಅನ್ನು ಅಲ್ಲಿ ನಮೂದಿಸಿ.
OTP ಅನ್ನು ನಮೂದಿಸಿದ ನಂತರ, ನೀವು ಅಲ್ಲಿ ಗೃಹಲಕ್ಷ್ಮಿ (Gruhalakshmi) ಫಲಾನುಭವಿಯ ವಿವರಗಳನ್ನು ನಿಮ್ಮ ಮುಂದೆ ನೋಡುತ್ತೀರಿ. ನಂತರ ನೀವು ಮುಂದುವರಿಸಲು “ಸರಿ” ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ನಂತರ ನೀವು ಅಲ್ಲಿ M-PIN ರಚಿಸಿ. ನಂತರ ನೀವು ಅಲ್ಲಿ ಫಲಾನುಭವಿಯ ಆಯ್ಕೆ ಮಾಡಬೇಕಾಗುತ್ತದೆ ಮತ್ತು M-PIN ಅನ್ನು ನಮೂದಿಸುವ ಮೂಲಕ ಲಾಗ್ ಇನ್ ಮಾಡಿದ ನಂತರ, ಪಾವತಿ ಸ್ಥಿತಿ ಆಪ್ಷನ್ ಅನ್ನು ಕ್ಲಿಕ್ ಮಾಡಿ.
ಅಲ್ಲಿ ನೀವು ಎರಡು ಆಯ್ಕೆಗಳನ್ನು ನೋಡುತ್ತೀರಿ: ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ. Grulahakshmi ಯೋಜನೆಯಿಂದ ಹಣ ಸ್ಟೇಟಸ್ ಚೆಕ್ ಪಡೆಯಲು Grulahakshmi ಆಯ್ಕೆಯನ್ನು ಕ್ಲಿಕ್ ಮಾಡಿ. ಮುಂದೆ, ನಿಮ್ಮ ಖಾತೆಗೆ ಹಣವನ್ನು ಯಾವಾಗ ಜಮಾ ಮಾಡಲಾಗಿದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ನೀವು ಆಲ್ಲಿ ಪರಿಶೀಲಿಸಿ. ಹೀಗೆ ನೀವು ನಿಮ್ಮ ಮೊಬೈಲ್ ಫೋನ್‌ನಲ್ಲಿ ನಿಮ್ಮ ಗೃಹಲಕ್ಷ್ಮಿ ಯೋಜನೆ ಬ್ಯಾಲೆನ್ಸ್ ಅನ್ನು ಸುಲಭವಾಗಿ ಪರಿಶೀಲಿಸಬಹುದು.