Gruha Jyothi Scheme: ಬಾಡಿಗೆ ಮನೆಯಲ್ಲಿ ವಾಸ ಇರುವವರಿಗೆ ಗೃಹಜ್ಯೋತಿ ಉಚಿತ ವಿದ್ಯುತ್ ಲಾಭವನ್ನು ಪಡೆಯಲು ಸರ್ಕಾರದಿಂದ ಹೊಸ ನಿಯಮ ಜಾರಿ.!!

Gruha Jyothi Scheme: ನಮ್ಮ ರಾಜ್ಯದಲ್ಲಿ ಬಾಡಿಗೆ ಮನೆಗಳಲ್ಲಿ ವಾಸವನ್ನು ಮಾಡುತ್ತಿರುವವರು ಒಂದು ವೇಳೆ ಏನಾದರೂ ಸಮಸ್ಯೆಯಿಂದ ಮನೆಯನ್ನು ಬದಲಾಯಿಸಿದರೆ, ಅಂತಹವರು ಈ ಗೃಹಜ್ಯೋತಿ ಯೋಜನೆಯ ಲಾಭವನ್ನು ತಮ್ಮ ಹೊಸ ಬಾಡಿಗೆ ಮನೆಯಲ್ಲಿ ಪಡೆಯಲು ಸಾಧ್ಯವಿರಲಿಲ್ಲ. ಆದರೆ ಈಗ ನಮ್ಮ ರಾಜ್ಯ ಸರ್ಕಾರವು ಇದಕ್ಕೇ ಒಂದು ಹೊಸ ವ್ಯವಸ್ಥಯನ್ನು ಮತ್ತು ನಿಯಮವನ್ನು ಜಾರಿಗೆ ತಂದಿದೆ.

Gruha Jyothi Scheme: ಕಳೆದ ವರ್ಷದಿಂದ ಕಾಂಗ್ರೆಸ್ ಸರ್ಕಾರವು ನಮ್ಮ ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದಿದೆ. ಅನೇಕ ಜನರು ತಮ್ಮ ವಿದ್ಯುತ್ ಶುಲ್ಕವನ್ನು ಪಾವತಿಸದೆ ಈ ಯೋಜನೆಯ ಉಚಿತ ವಿದ್ಯುತ್ ಲಾಭವನ್ನು ಪಡೆಯುತ್ತಿದ್ದಾರೆ. ಈ ಒಂದು ಯೋಜನೆಯ ಅಡಿಯಲ್ಲಿ, ಜನರು ಪ್ರತಿ ತಿಂಗಳು 200 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಪಡೆಯುತ್ತಾರೆ. ಜನರು ಕಳೆದ ವರ್ಷ ಬಳಸಿದ ಸರಾಸರಿ ಪ್ರಮಾಣದ ವಿದ್ಯುತ್ ಅನ್ನು ಉಚಿತವಾಗಿ ಬಳಸಬಹುದು. ಜೊತೆಗೆ ಶೇ.10ರಷ್ಟು ಹೆಚ್ಚುವರಿ ವಿದ್ಯುತ್ ಕೂಡ ಬಳಸಬಹುದು. ಇದು ಗೃಹ ಜ್ಯೋತಿ ಯೋಜನೆಯ ಫಲಾನುಭಿಗಳ ಪ್ರಯೋಜನಕ್ಕೆ ರಾಜ್ಯ ಸರ್ಕಾರದ ಕೊಡುಗೆಯಾಗಿದೆ. 

ಇದನ್ನೂ ಓದಿ: PhonePe Loan: ನಿಮಗೆ ತುರ್ತಾಗಿ ಸಾಲ ಬೇಕಾದರೆ ಫೋನ್ ಮೂಲಕ ಮನೆಯಲ್ಲಿಯೇ ಕುಳಿತು ಲಕ್ಷಾಂತರ ರೂಪಾಯಿ ಸಾಲಕ್ಕಾಗಿ ತಕ್ಷಣ ಅರ್ಜಿ ಸಲ್ಲಿಸಿ.!

ಗೃಹಜ್ಯೋತಿ ಯೋಜನೆ ಜಾರಿಯಾಗಿ (1) ಒಂದು ವರ್ಷದ ನಂತರ ಸರ್ಕಾರವು ಇದೀಗ ಜನರಿಗೆ ಮತ್ತೊಂದು ಹೊಸ ಸೇವೆಯನ್ನು ಪರಿಚಯಿಸಿದೆ. ಇದರಿಂದ ಗೃಹಜ್ಯೋತಿಯ ವ್ಯವಸ್ಥೆಯಲ್ಲಿನ ಒಂದು ಸಮಸ್ಯೆಗೆ ಪರಿಹಾರ ದೊರಕಿದೆ. ಇದು ಯಾವ ರೀತಿಯ ಸೇವೆಯಾಗಿದೆ? ಇದರಿಂದ ಏನು ಪ್ರಯೋಜನ? ಎಲ್ಲವನ್ನೂ ಕೆಳಗೆ ವಿವರವಾಗಿ ತಿಳಿದುಕೊಳ್ಳಿ.

ರಾಜ್ಯದಲ್ಲಿ ಕೆಲವು ಜನರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ ಮತ್ತು ಒಂದು ವೇಳೆ ಅವರು ಬೇರೆ ಮನೆಗೆ ಸ್ಥಳಾಂತರಗೊಂಡರೆ, ಅವರು ಹೊಸ ಮನೆಯಲ್ಲಿ ಗೃಹ ಜ್ಯೋತಿ ಯೋಜನೆಗೆ ಅರ್ಹರಾಗಿರುವುದಿಲ್ಲ ಹೀಗೆ ಈ ನಿಯಮ ಹಿಂದೆ ಇತ್ತು. ಆದರೆ ಈಗ ಕಾಂಗ್ರೆಸ್ ಸರ್ಕಾರವು ಇದಕ್ಕಾಗಿ ಒಂದು ಹೊಸ ವ್ಯವಸ್ಥೆಯನ್ನು ಈಗ ಜಾರಿಗೆ ತಂದಿದೆ. ನಿಮ್ಮ ಮನೆ RR ಸಂಖ್ಯೆಯನ್ನು ಅನ್ಲಿಂಕ್ (D-Link) ಮಾಡುವ ಮೂಲಕ ಮತ್ತು ಅದನ್ನು ನಿಮ್ಮ ಹೊಸ ಮನೆಯ RR ಸಂಖ್ಯೆಯೊಂದಿಗೆ ಲಿಂಕ್ (Link) ಮಾಡುವ ಮೂಲಕ ನೀವು ನಿಮ್ಮ ಮನೆಯನ್ನು ಬದಲಾಯಿಸಿದರೂ ಸಹ ಗೃಹ ಜ್ಯೋತಿ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಇದು ನಿಮ್ಮನ್ನು ಸಕ್ರಿಯಗೊಳಿಸುತ್ತದೆ. ಇದು ಸರ್ಕಾರದ ಹೊಸ ವ್ಯವಸ್ಥೆ ಯಾಗಿದೆ.

ಇದನ್ನೂ ಓದಿ: LPG Cylinder Amount Cashback: LPG ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಎಲ್ಲರಿಗೆ ಭರ್ಜರಿ ಸಿಹಿ ಸುದ್ದಿ.! ನಿಮ್ಮ ಸಿಲಿಂಡರ್ ಮೇಲೆ ಸಿಗಲಿದೆ ಭಾರೀ ರಿಯಾಯಿತಿ.!

ಈ ಪ್ರಕ್ರಿಯೆಯನ್ನು ಹೇಗೆ ಮಾಡಿಕೊಳ್ಳುವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ:

RR ಸಂಖ್ಯೆಯನ್ನು ಡಿ-ಲಿಂಕ್ (D-Link) ಮಾಡುವ ಪ್ರಕ್ರಿಯೆಯ ಪೂರ್ತಿ ವಿವರ.!

ಸೇವಾ ಸಿಂಧು ಪೋರ್ಟಲ್ ಮೂಲಕ RR ಸಂಖ್ಯೆಯನ್ನು ಡಿ-ಲಿಂಕ್ (D-Link) ಮಾಡಬೇಕಾಗುತ್ತದೆ. ಇದಕ್ಕಾಗಿ ಫಲಾನುಭಿಗಳು ಮೊದಲು ಸರಕಾರದ ಅಧಿಕೃತವಾದ ಜಾಲತಾಣ https://sevasindhu.karnataka.gov.in/ ಇದಕ್ಕೆ ಭೇಟಿ ನೀಡಬೇಕು.

ನಂತರ ನೀವು ಅಲ್ಲಿ ನಿಮ್ಮ ಮನೆಯ ಗೃಹಜ್ಯೋತಿ ಯೋಜನೆಗೆ (Link) ಲಿಂಕ್ ಮಾಡಿರುವ ಆಧಾರ್ ಸಂಖ್ಯೆಯನ್ನು ನಮೂದಿಸಿ, ನಂತರ “Get Details” ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.

ಈಗ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಇರುವ ಫೋನ್ ನಂಬರ್ ಗೆ OTP ಬರುತ್ತದೆ ಪರಿಶೀಲಿಸಿ, ಮತ್ತು ಅದನ್ನು ನಮೂದಿಸಿ, ಹಾಗೂ ದೃಢೀಕರಿಸಿ.

ಇದೆಲ್ಲಾ ಆದ ನಂತರ ನಿಮ್ಮ ಹಳೆಯ RR ನಂಬರ್ ಅನ್ನು ಡಿ-ಲಿಂಕ್ (D-Link) ಮಾಡಿ, ಮತ್ತು ನಿಮ್ಮ ಹೊಸ RR ನಂಬರ್ ಅನ್ನು ಲಿಂಕ್ ಮಾಡಿಕೊಳ್ಳಿ.

ಇದನ್ನೂ ಓದಿ: Gruhalakshmi Amount Credited: ಗೃಹಲಕ್ಷ್ಮಿ ಯೋಜನೆಯ ಜೂನ್ ₹2,000 ರೂ. ಹಣ ಇಂದು ಬ್ಯಾಂಕ್ ಖಾತೆಗೆ ಜಮಾ ಆಗಿದೆ.! ಇಲ್ಲಿದೆ ನೋಡಿ Live Proof.!

WhatsApp Group Join Now
Telegram Group Join Now

Leave a Comment

error: Don't Copy Bro !!