Garantee Scheme’s Amount : ಗೃಹಲಕ್ಷ್ಮಿ, ಅನ್ನಭಾಗ್ಯ & ಇತರೇ ಯೋಜನೆಗಳು ಎರಡು ತಿಂಗಳಿಂದ ಸ್ಥಗಿತ.!! ಗ್ಯಾರಂಟಿ ಯೋಜನೆಗಳು ನಿಲ್ಲಲಿವೆಯಾ.? ಇಲ್ಲಿದೆ ಪೂರ್ತಿ ವಿವರ.!!
ನಮ್ಮ ಕರ್ನಾಟಕದ ಕಾಂಗ್ರೆಸ್ ಸರ್ಕಾರವೂ ಗ್ಯಾರಂಟಿ ಯೋಜನೆಗಳ ಬಗ್ಗೆ ಕರ್ನಾಟಕದ ಎಲ್ಲಾ ಜನತೆಗೆ ಒಂದು ಬಿಗ್ ಶಾಕಿಂಗ್ ಅಪ್ಡೇಟ್ ನೀಡಿದೆ.
ಕಳೆದ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ವೂ 135 ಸೀಟ್ ಗಳನ್ನು ಗೆದ್ದುಕೊಂಡು ನಮ್ಮ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೂ ಅಧಿಕಾರವನ್ನು ಪಡೆದುಕೊಂಡಿತು. ನಮ್ಮ ರಾಜ್ಯ ಕರ್ನಾಟಕದಲ್ಲಿ ಕಾಂಗ್ರೆಸ್ನ ಪಕ್ಷ ವೂ ಚುನಾವಣೆ ಗೆಲ್ಲಲು ಕಾಂಗ್ರೆಸ್ ಪಕ್ಷವೂ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದ್ದಾ ಐದು (5) ಗ್ಯಾರಂಟಿ ಯೋಜನೆಗಳೇ ಇದಕ್ಕೆ ಕಾರಣ.
Table of Contents
ಗ್ಯಾರಂಟಿ ಯೋಜನೆಗಳು ಚುನಾವಣೆಗೋಸ್ಕರ ಮಾಡಿದ ತಂತ್ರವೇ.!
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೂ ತಾವು ಅಧಿಕಾರಕ್ಕೆ ಬಂದ ಕೂಡಲೇ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಯಿತು. ಹಾಗೂ ಇಲ್ಲಿಯವರೆಗೂ ಸಹ ಯೋಜನೆಯ ಫಲಾನುಭವಿಗಳು 5 ಗ್ಯಾರಂಟಿ ಯೋಜನೆಗಳ ಸೌಲಭ್ಯವನ್ನು ಪಡೆಯುತ್ತಿದ್ದರು.
ಇದರ ಬೆನ್ನಲ್ಲೇ ಬಹಳಷ್ಟು ಮಂದಿ ಈ ಗ್ಯಾರಂಟಿ ಯೋಜನೆಗಳ ಬಗ್ಗೆಯೂ ಸಹ ಎಚ್ಚರಿಕೆಯನ್ನೂ ನೀಡುತ್ತಿದ್ದರು. ಈ 5 ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಬಹಳ ದಿನಗಳಕಾಲ ನಡೆಸಲಾಗುವುದಿಲ್ಲ. ಚುನಾವಣೆಯ ಸಂದರ್ಭದಲ್ಲಿ ಭರವಸೆಯನ್ನು ನೀಡಿದಷ್ಟು ಇದು ಸುಲಭವಲ್ಲಾ. ರಾಜ್ಯ ಸರ್ಕಾರವೂ ದಿವಾಳಿಯಾಗುವ ಪರಿಸ್ಥಿತಿಗೆ ಎದುರಾಗಲಿದೆ.
ಈ ಯೋಜನೆಗಳಿಂದ ಯಾವುದೇ ರೀತಿಯಾದ ಅಭಿವೃದ್ಧಿಗಳನ್ನು ಮಾಡಲು ಸಾಧ್ಯವಾಗುವುದಿಲ್ಲ, ಯಾರಿಗೂ ಅನುದಾನಗಳು ಸಿಗದೇ ನಿಮ್ಮ ಕಾಂಗ್ರೆಸ್ ಪಕ್ಷದ ಶಾಸಕರುಗಳೇ ರೊಚ್ಚಿಗೆದ್ದು ಹೇಳುವ ನಿಮಗೆ ಬುದ್ದಿ ಹೇಳುವ ಪರಿಸ್ಥಿತಿಯು ಬರಲಿದೆ. ಈ ಹಿಂದೆಯೂ ಸಹ ರಾಜ್ಯ ಸರ್ಕಾರಕ್ಕೆ ಅನೇಕರೀತಿ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಸರ್ಕಾರದ ಹಾಗೇ ನಮಗೆ 40% ಕಮಿಷನ್ ಬರುತ್ತಿಲ್ಲಾ.!
5 ಗ್ಯಾರಂಟಿ ಯೋಜನೆಗಳ ಕುರಿತಂತೆ ಸರ್ಕಾರಕ್ಕೆ ಎಚ್ಚರಿಕೆಯನ್ನ ಕೊಟ್ಟಾಗ ಕಾಂಗ್ರೆಸ್ ಸರ್ಕಾರದ ಸಿಎಂ ಹಾಗೂ ಶಾಸಕರು, ಡಿಸಿಎಂ ಎಲ್ಲರೂ ಕೂಡ ಸಮರ್ಥಿಸಿಕೊಳ್ಳುತ್ತಿದ್ದಾರೆ. BJP ಸರ್ಕಾರವೂ ಅಧಿಕಾರದಲ್ಲಿದ್ದಾಗ 40% ರಷ್ಟು ಕಮಿಷನ್ ಅನ್ನು ಪಡೆಯುತ್ತಿತ್ತು.
ನಾವು ಬಿಜೆಪಿ ಸರ್ಕಾರದಂತೆ ನಾವು ಕಮಿಷನ್ ಪಡೆಯುವುದಿಲ್ಲ ಹಾಗೂ ಅದೇ ಮೊತ್ತವನ್ನು 5 ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನತೆಗೆ ನೀಡುತ್ತೇವೆ ಎಂದು ಕಾಂಗ್ರೆಸ್ ಸರ್ಕಾರದ ಎಲ್ಲಾರು ಸಮರ್ಥಿಸಿಕೊಂಡರು. ಹೀಗಾಗಿಯೇ 5 ಗ್ಯಾರಂಟಿ ಯೋಜನೆಗಳೂ ಕೂಡ ಸುಗಮವಾಗಿ ಇದೇ ರೀತಿಯಲ್ಲಿ ಮುಂದುವರೆಯುತ್ತವೆ ಮತ್ತು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಕೂಡ ಚೆನ್ನಾಗಿ ನಿರ್ವಹಿಸುತ್ತೇವೆ ಎಂದು ಅವರು ಹೇಳಿಕೆ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯು ಎರಡು ತಿಂಗಳಿಂದಲೂ ಸಹ ಸ್ಥಗಿತಗೊಂಡಿದೆ.!
ಪ್ರಸ್ತುತ ಲೋಕಸಭೆಯ ಚುನಾವಣೆಯು ಆಗಿ ಸುಮಾರು ಎರಡು ತಿಂಗಳು ಆದರೂ ಸಹ ಗೃಹಲಕ್ಷ್ಮಿ ಯೋಜನೆಯ ಹಣವೂ ಮಹಿಳಾ ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿಲ್ಲ. ಇದರ ಜೊತೆಗೆ ಅನ್ನಭಾಗ್ಯ ಯೋಜನೆಯ ಅಕ್ಕಿಯ ಬದಲಿ ಕೊಡವ ಹಣವನ್ನು ಕಾಂಗ್ರೆಸ್ ಸರ್ಕಾರವೂ ಸುಮಾರು ಒಂದು ತಿಂಗಳಿನಿಂದ ರಾಜ್ಯದ ಯಾವ ಫಲಾನುಭವಿಗಳಿಗೂ ಸಹ ತಲುಪಿಲ್ಲ. ಇದರಿಂದಾಗಿ ಕರ್ನಾಟಕದ ಜನರಿಗೆ ಕಾಂಗ್ರೆಸ್ ಸರ್ಕಾರವೂ ನೀಡುತ್ತಿರುವ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಿದೆಯೇ ಎಂಬ ಗೊಂದಲವೂ ಮೂಡಿದೆ.
ರಾಜ್ಯ ಸರ್ಕಾರದ ಬಳಿ ಯಾವುದೇ ಗ್ಯಾರಂಟಿ ಯೋಜನೆಗಳಿಗೆ ಹಣ ಇಲ್ಲವಾ.!
ಈ ಬಾರಿಯ ಕಾಂಗ್ರೆಸ್ ಸರ್ಕಾರದ ಬಜೆಟ್ನಲ್ಲಿ ₹56,000 ಕೋಟಿ ರೂಪಾಯಿಗಳನ್ನು ಎಲ್ಲಾ ಗ್ಯಾರಂಟಿ ಯೋಜನೆಗಳಿಗೆ ಸೀಮಿತವಾಗಿಟ್ಟಿತ್ತು. ಈಗ ರಾಜ್ಯ ಸರ್ಕಾರದ ಪರಿಸ್ಥಿತಿಯು ಭಾರೀ ವಿಪರೀತವಾಗಿದ್ದು, ರಾಜ್ಯ ಸರ್ಕಾರದ ಬಳಿ ಯಾವುದೇ ರೀತಿಯ ಹಣವಿಲ್ಲ ಎಂದು ಹೇಳಲಾಗುತ್ತಿದೆ.
ನಮ್ಮ ಕರ್ನಾಟಕ ರಾಜ್ಯದಲ್ಲಿ ಅನೇಕ ರೀತಿಯ ಸಮಸ್ಯೆಗಳು ಇವೆ. ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ಬಳಿ ಯಾವುದೇ ರೀತಿಯ ಹಣವಿಲ್ಲದ ಕಾರಣ ಯಾವುದೇ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲಾ ಎಂದು ಹೇಳಲಾಗುತ್ತಿದೆ.
ಕರ್ನಾಟಕದಲ್ಲಿ ರಾಜ್ಯದ ಶಾಸಕರಿಗೆ ಯಾವುದೇ ಅನುದಾನ ಈಗ ಸಿಗುತ್ತಿಲ್ಲ ಎಂದು ಕಾಂಗ್ರೆಸ್ ಪಕ್ಷದ ಶಾಸಕರಲ್ಲಿಯೇ ಗದ್ದಲ ಮೂಡಿದೆ. ಪ್ರಸ್ತುತವಾಗಿ ಕರ್ನಾಟಕ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಸ್ಟಾಗಿತಗೊಳಿಸಬೇಕು ಎಂಬ ಮಾತನ್ನು ಪ್ರಮುಖ ನಾಯಕರುಗಳು ಹೇಳುತ್ತಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿದರೆ, ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೊಡೆತ.!
ಇದೀಗ ಆಗಿರುವ ಎಲ್ಲಾ ಹಲವರು ಸಮಸ್ಯೆಗಳಿಂದ ರಾಜ್ಯ ಸರ್ಕಾರದ ಹತ್ತಿರ ಯಾವುದೇ ಹಣವಿಲ್ಲ, ಈ ಬಗ್ಗೆ ಕಾಂಗ್ರೆಸ್ ಸರ್ಕಾರದ ಹಲವು ಪ್ರಮುಖ ನಾಯಕರು ಈ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವಂತೆ ಮನವಿಯನ್ನೂ ಮಾಡುತ್ತಿದ್ದಾರೆ. ಈ ಬಗ್ಗೆಯು ಸಹ ಎಲ್ಲೆಡೆ ಚರ್ಚೆಗಳು ಜೋರಾಗಿ ನಡೆಯುತ್ತಿದೆ.
ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಲ್ಲಾ.!
ರಾಜ್ಯ ಕಾಂಗ್ರೆಸ್ ಪಕ್ಷದ ಸಿಎಂ ಹಾಗೂ ಡಿಸಿಎಂ ಮತ್ತು ಸಚಿವರು ಹೇಳಿರುವಂತೆ ಯಾವುದೇ ಕಾರಣಕ್ಕೂ ಸಹ 5 ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲ್ಲಾ ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಏನಾದರೂ ನಿಲ್ಲಿಸಿದರೆ ರಾಜ್ಯದ ಕಾಂಗ್ರೆಸ್ ಪಕ್ಷಕ್ಕೆ ಹೊಡೆತ ಬೀಳಲಿದೆ.
ಈ ಲೇಖನವು ನಿಮಗೆ ಉತ್ತಮ ಮಾಹಿತಿಯನ್ನು ಕೊಟ್ಟಿದ್ದಲ್ಲಿ, ಈ ಉತ್ತಮ ಮಾಹಿತಿ ಇರುವ ಲೇಖನವನ್ನೂ ನಿಮ್ಮ ಎಲ್ಲಾ ಸ್ನೇಹಿತರಿಗೆ ಮತ್ತು ಕುಟುಂಬ ಸ್ನೇಹಿತರಿಗೆ ಈ ಲೇಖನವನ್ನೂ ಅವರೊಂದಿಗೆ ತಪ್ಪದೆ ಹಂಚಿಕೊಳ್ಳಿ. ಇಲ್ಲಿಯವರೆಗೂ ಸಂಪೂರ್ಣವಾಗಿ ಓದಿದ್ದಕ್ಕೆ ನಿಮಗೆಲ್ಲರಿಗೂ ಧನ್ಯವಾದಗಳು.
ಇತರೆ ವಿಷಯಗಳು:
LPG ಗ್ಯಾಸ್ ಸಿಲಿಂಡರ್ ಬಳಸುವ ಗ್ರಾಹಕರಿಗೆ ಸಿಹಿ ಸುದ್ದಿ.!! LPG ಗ್ಯಾಸ್ ಸಿಲಿಂಡರ್ ದರದಲ್ಲಿ 300 ರೂ. ಇಳಿಕೆ.!!
ಮಹಿಳೆಯರ ಖಾತೆಗೆ ₹5000 ರೂ.!! ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ಜಾರಿಗೆ.!! ಸಂಪೂರ್ಣ ಮಾಹಿತಿ ಇಲ್ಲಿದೆ.!!