Farmers Loan Interest Waiver: ರೈತರು ಮಾಡಿದ ಸಾಲದ ಬಡ್ಡಿ ಮನ್ನಾ.!! ಯಾರೆಲ್ಲಾ ಇದಕ್ಕೆ ಅರ್ಹರು.? ಹೇಗೆ ಅರ್ಜಿಯನ್ನು ಸಲ್ಲಿಸಬೇಕು.? ಇಲ್ಲಿದೆ ಪೂರ್ತಿ ವಿವರ.!!

Farmers Loan Interest Waiver: ನಮಸ್ಕಾರ ಸ್ನೇಹಿತರೇ, ನಿಮ್ಮೆಲ್ಲರಿಗೂ ಕೂಡ ಈ ಲೇಖನದ ಮೂಲಕ ತಿಳಿಸುವ ವಿಷಯ, ನಮ್ಮ ರಾಜ್ಯದಲ್ಲಿ ರೈತರು ಬ್ಯಾಂಕ್‌ಗಳಿಂದ ಪಡೆದಿರುವ ಸಾಲದ ಬಡ್ಡಿಯ ಮನ್ನಾಕ್ಕೆ ಅರ್ಜಿಯನ್ನೂ ಸಲ್ಲಿಸುವಂತೆ ಸರ್ಕಾರ ರೈತರಿಗೆ ಅರ್ಜಿ ಆಹ್ವಾನ ಮಾಡಿದೆ. ರಾಜ್ಯ ಪಶುಸಂಗೋಪನಾ ಇಲಾಖೆಯ ಮೂಲಕ ಹೈನುಗಾರಿಕೆಗಾಗಿ ರೈತರು ಬ್ಯಾಂಕ್‌ಗಳಿಂದ ಪಡೆದ ಸಾಲದ ಮೇಲಿನ ಬಡ್ಡಿ ಸಹಾಯಧನವನ್ನು ಪಡೆಯಲು ಅರ್ಹ ರೈತರು ಈ ಪಶುಸಂಗೋಪನಾ ಇಲಾಖೆಯ ಸಾಲದ ಬಡ್ಡಿ ಮನ್ನಾ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು? ನಾವು ಹೇಗೆ ಅರ್ಜಿ ಸಲ್ಲಿಸುವುದು? ಈ ಲೇಖನದಲ್ಲಿ ನೀವು ಅರ್ಜಿಯನ್ನು ಸಲ್ಲಿಸಲು ಯಾವ ಡಾಕ್ಯುಮೆಂಟ್ ಅಗತ್ಯವಿದೆ ಎಂಬುದರ ಕುರಿತು ಸಮಗ್ರ ಮಾಹಿತಿಯನ್ನು ನೀವು ಕಾಣಬಹುದು. ಕೊನೆಯವರೆಗೂ ಓದಿ ಮತ್ತು ನೀವು ಈ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ನಮ್ಮ ರಾಜ್ಯದ ಪಶುಸಂಗೋಪನಾ ಇಲಾಖೆಯು ರೈತರಿಗೆ ಹೈನುಗಾರಿಕೆಯಿಂದ ಉತ್ತಮ ಆದಾಯವನ್ನು ಗಳಿಸಲು ಸಹಾಯ ಮಾಡುವ ಉದ್ದೇಶದಿಂದ ಸಾಲವನ್ನು ನೀಡುತ್ತದೆ, ಆದರೆ ಬಡ್ಡಿದರವನ್ನು ಮನ್ನಾ ಮಾಡುತ್ತದೆ ಅಥವಾ ಸಾಲದ ವಾರ್ಷಿಕ ಬಡ್ಡಿಯನ್ನೂ ಮನ್ನಾ ಮಾಡುತ್ತದೆ ಇಲ್ಲವಾದರೆ ಸಹಾಯಧನವನ್ನು ನೀಡುತ್ತದೆ. ಯೋಜನೆಯಡಿಯಲ್ಲಿ, ಹೈನುಗಾರಿಕೆಯ ಜಾನುವಾರುಗಳನ್ನು ಖರೀದಿಸಲು ಮಹಿಳಾ ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಪಡೆದ ಎಲ್ಲಾ ಸಾಲಗಳ ಮೇಲಿನ ಬಡ್ಡಿ ಸಹಾಯಧನವನ್ನು ಒದಗಿಸಲಾಗುತ್ತದೆ.

Farmers Loan Interest Waiver: ಸಾಲದ (Loan) ಮೇಲೆ ಎಷ್ಟು ಬಡ್ಡಿಯು ಮನ್ನಾ ಆಗಲಿದೆ.?

ಸ್ನೇಹಿತರೆ ಮತ್ತು ರೈತ ಬಾಂಧವರೇ ರೈತರು ಹೈನುಗಾರಿಕೆ ಪ್ರಾರಂಭ ಮಾಡಲು ಖರೀದಿ ಮಾಡುವ ಎಮ್ಮೆಗಳ ಮತ್ತು ಹಸುಗಳ ಮೇಲೆ ಮಾಡಿದ ಸಾಲವನ್ನು, ನಿಗದಿತವಾದ ಕಾಲಾವಕಾಶದ ಒಳಗೆ ಮರಳಿ ಪಾವತಿ ಮಾಡದಿದ್ದರೆ ರಾಜ್ಯ ಸರ್ಕಾರದ ಪಶುಸಂಗೋಪನಾ ಇಲಾಖೆಯಿಂದ ಶೇಖಡ 6% ರಷ್ಟು ಬಡ್ಡಿ ಸಹಾಯಧನವನ್ನು ರೈತರಿಗೆ ಮಾಡುತ್ತಿದೆ.

ಸಾಲದ ಬಡ್ಡಿ ಮನ್ನಾ ಆಗಲು ಅರ್ಜಿಯನ್ನು ಸಲ್ಲಿಕೆ ಮಾಡಲು ಯಾರೆಲ್ಲಾ ಅರ್ಹರು?

ಹೌದು, ಎಲ್ಲಾ ಅರ್ಹ ಗ್ರಾಮೀಣ ಮಹಿಳೆಯರು ಸರ್ಕಾರಿ ಬ್ಯಾಂಕ್‌ಗಳು, ಗ್ರಾಮೀಣ ಬ್ಯಾಂಕ್‌ಗಳು ಮತ್ತು ಡೈರಿ ಸಹಕಾರಿ ಬ್ಯಾಂಕ್‌ಗಳಿಂದ ಪಡೆದ ಸಾಲದ ಮೇಲಿನ ಬಡ್ಡಿ ಮನ್ನಾಕ್ಕೆ ಅರ್ಜಿ ಸಲ್ಲಿಸಬಹುದು. ನಿಗದಿತ ಸಮಯದಲ್ಲಿ ಸಾಲವನ್ನು ಮರುಪಾವತಿ ಮಾಡಿದ ಅರ್ಹ ರೈತರು ಮಾತ್ರ ಈ ಸಾಲದ ಮೇಲಿನ ಬಡ್ಡಿ ಮನ್ನಾ/ವಿನಾಯಿತಿಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಬಹುದು.

ಸಾಲದ ಮೇಲಿ ಬಡ್ಡಿ ಮನ್ನಾ ಆಗಲು ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳೇನು.?

  • ಅರ್ಜಿದಾರರ ಆಧಾರ್ ಕಾರ್ಡ್
  • ಅರ್ಜಿದಾರರ ರೇಷನ್ ಕಾರ್ಡ್
  • ಅರ್ಜಿದಾರರ ಬ್ಯಾಂಕ್ ಖಾತೆ ಪಾಸ್ ಬುಕ್
  • ಅರ್ಜಿದಾರರ ಭಾವಚಿತ್ರ
  • ಅರ್ಜಿ ಸಲ್ಲಿಸುವ ರೈತರ ಉತಾರ

ಸಾಲದ ಮೇಲಿಬಡ್ಡಿ ಮನ್ನಾ ಆಗಲು ಅರ್ಜಿಯನ್ನ ಎಲ್ಲಿ ಸಲ್ಲಿಸಬೇಕು.

ಸಾಲದ ಮೇಲೆ ಬಡ್ಡಿ ಮನ್ನಾ ಯೋಜನೆಯ ಅರ್ಹರಾಗಿರುವ ರೈತ ಮಹಿಳೆಯರು ತಮ್ಮ ತಾಲೂಕು ಪಶುವೈದ್ಯಕೀಯ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ನಂತರ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now

Leave a Comment

error: Don't Copy Bro !!