Crop Insurance Registration : ನಮಸ್ಕಾರ ಸ್ನೇಹಿತರೆ, ಕರ್ನಾಟಕದ ರೈತಾಪಿ ಮಿತ್ರರಿಗೆ ಮತ್ತೊಂದು ಹೊಸ ಲೇಖನದ ಮೂಲಕ ತಮ್ಮಗೆ ತಿಳಿಸುವ ವಿಷಯವೇನೆಂದರೆ, ಬೆಳೆ ವಿಮೆಯ ನೊಂದಣಿಗೆ ಫ್ರೂಟ್ಸ್ ಐಡಿ ಕಡ್ಡಾಯವಾಗಿ ಇರಬೇಕು. ಇಲ್ಲವಾದರೆ ಬೆಳೆ ಪರಿಹಾರದ ಹಣ ಬರುವುದಿಲ್ಲ. ಈ ಬೆಳೆ ಪರಿಹಾರದ ಹಣದ ಸಂಪೂರ್ಣ ಮಾಹಿತಿಗಾಗಿ ಲೇಖನವನ್ನು ತಪ್ಪದೆ ಕೊನೆಯವರೆಗೂ ನೋಡಿ.
ಹೌದು ಸ್ನೇಹಿತರೆ, ಕರ್ನಾಟಕದ ರೈತ ಸುರಕ್ಷಿತ ಪ್ರಧಾನ ಮಂತ್ರಿಯವರ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮತ್ತು ಹೋಬಳಿ ಮಟ್ಟದಲ್ಲಿ ಅಧಿಸೂಚಿತ ಬೆಳೆಗಳಿಗೆ ಬ್ಯಾಂಕ್ ಅಥವಾ ಸಾಮಾನ್ಯ ಸೇವಾ ಕೇಂದ್ರಗಳು ಮತ್ತು ಗ್ರಾಮ ಕೇಂದ್ರಗಳಲ್ಲಿ ರೈತರಿಗೆ ನೋಂದಣಿಗಾಗಿ ಅವರು ತಮ್ಮ ಫ್ರೂಟ್ಸ್ ಐಡಿಯನ್ನು ತಂತ್ರಾಂಶದಲ್ಲಿ ಕಡ್ಡಾಯವಾಗಿ ನೊಂದಾಯಿಸಿಕೊಳ್ಳಬೇಕಾಗಿದೆ.
Crop Insurance Registration : ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಾದ ಸರ್ವೆ ನಂಬರಿಗೆ ಮಾತ್ರ ರೈತರು ತಮ್ಮ ಬೆಳೆವಿಮೆಗೆ ನೋಂದಣಿ ಮಾಡಿಕೊಳ್ಳಬೇಕು:
ರೈತರು ತಮ್ಮ ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಾದ ವಿಸ್ತೀರ್ಣಕ್ಕೆ ಮಾತ್ರ ತಮ್ಮ ಬೆಳವಿನಮೆ ಮಾಡಿಸಲು ಸಾಧ್ಯವಾಗುತ್ತದೆ. ಫ್ರೂಟ್ಸ್ ಐಡಿ ದಾಖಲಿಸೋದು ಅಥವಾ ಯಾವುದೇ ದಾಖಲೆಗಳ ಮಾರ್ಪಾಡಿಗಾಗಿ ಹತ್ತಿರದ ಯಾವುದೇ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ. ಒಂದು ವೇಳೆ ರೈತರ ಬಳಿ ಅವರ ಫ್ರೂಟ್ಸ್ ಐಡಿ ಇಲ್ಲವಾದರೆ ಸಂಪರ್ಕ ಕೇಂದ್ರದವರು ನಿಮಗೆ ಫ್ರೂಟ್ಸ್ ಐಡಿಯನ್ನು ನೊಂದಣಿ ಮಾಡಿಕೊಡುತ್ತಾರೆ.
ಇದನ್ನೂ ಓದಿ: Free Housing Scheme: ಸರ್ಕಾರದಿಂದ ಉಚಿತ ಮನೆ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ! ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಆಹ್ವಾನ.
Crop Insurance Registration : ರೈತರು ಅವರ ಹೆಸರಲ್ಲಿ ಫ್ರೂಟ್ಸ್ ಐಡಿ ಇದೆಯಾ ಅಥವಾ ಇಲ್ಲವಾ ಎಂದು ಹೀಗೆ ಚೆಕ್ ಮಾಡಿಕೊಳ್ಳಿಬಹುದು:
ರೈತರು ಅವರ ಹೆಸರಲ್ಲಿ ಫ್ರೂಟ್ಸ್ ಐಡಿ ಇದೆಯೋ ಅಥವಾ ಇಲ್ಲಯೋ ಎಂಬುದನ್ನು ಚೆಕ್ ಮಾಡಿಕೊಳ್ಳಲು ಈ ಕೆಳಗೆ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಫ್ರೂಟ್ಸ್ ಐಡಿ ಇದೆಯಾ ಅಥವಾ ಇಲ್ಲವಾ ಎಂದು ಚೆಕ್ ಮಾಡಿ ಖಚಿತ ಪಡಿಸಿಕೊಳ್ಳಿ.
- ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಆಗ ನಿಮ್ಮ ಮುಂದೆ (ನಿಮ್ಮ ಫ್ರೂಟ್ಸ್ ಪಿಎಂ ಕಿಸಾನ್) ಎಂಬ ಒಂದು ಪೇಜ್ ಕಾಣಿಸುತ್ತದೆ.
- ನಂತರ ಅಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು.
- ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಿದ ಮೇಲೆ ನಿಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಇದ್ದರೆ ನಿಮ್ಮ ಹೆಸರು ಹಾಗೂ ಪಿಎಂಕೆಐಡಿ ಕಾಣಲಾಗುತ್ತದೆ.
- ರೈತರ ಬಳಿ ಫ್ರೂಟ್ಸ್ ಐಡಿ ಇದ್ದರೆ ಮಾತ್ರ ರೈತರಿಗೆ ಸರ್ಕಾರದ ವಿವಿಧ ಯೋಜನೆಗಳಿಂದ ಎಲ್ಲಾ ಸೌಲಭ್ಯ ಸಿಗಲಿದೆ.
ಫ್ರೂಟ್ಸ್ ಐಡಿ Check ಮಾಡಿಕೊಳ್ಳಿ: https://fruitspmk.karnataka.gov.in/MISReport/GetDetailsByAadhaar.aspx
ಫ್ರೂಟ್ಸ್ ಐಡಿ ಮಾಡಿಸಿಕೊಳ್ಳಲು ಯಾವೆಲ್ಲಾ ದಾಖಲೆಗಳು ಬೇಕಾಗುತ್ತದೆ:
ನೀವು ನಿಮ್ಮ ಹೆಸರಿಗೆ ಫ್ರೂಟ್ಸ್ ಐಡಿಯನ್ನು ಮಾಡಿಸಲು ನಿಮಗೆ ಆಧಾರ್ ಕಾರ್ಡ್ ಅಗತ್ಯವಾಗಿ ಇರಬೇಕಾಗುತ್ತದೆ. ನಿಮ್ಮ ಆಧಾರ್ ಕಾರ್ಡ್ ಮತ್ತು ನಿಮ್ಮ ಬ್ಯಾಂಕ್ ಖಾತೆ ಪುಸ್ತಕ ಮತ್ತು ಜಮೀನಿಗೆ ಸಂಬಂಧಿಸಿ ಎಲ್ಲಾ ದಾಖಲೆ ಅಂದರೆ (RTC) ಅಥವಾ ಪಹಣಿ ಸಲ್ಲಿಸಬೇಕಾಗುತ್ತದೆ. ಹಾಗೂ ನಿಮ್ಮ ಮೊಬೈಲ್ ನಂಬರ್ ಮತ್ತು ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ ಈ ಎಲ್ಲಾ ದಾಖಲೆಗಳು ರೈತರು ಫ್ರೂಟ್ಸ್ ಐಡಿಯನ್ನು ಮಾಡಿಸಿಕೊಳ್ಳಲು ಬೇಕಾಗುತ್ತದೆ. ನಂತರ ರೈತರು ತಮ್ಮ ಜಮೀನಿನ ಎಲ್ಲಾ ದಾಖಲೆಗಳು ಜೋಡಣೆ (ಲಿಂಕ್) ಆಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಬಹುದು.
ಫ್ರೂಟ್ಸ್ ಐಡಿಯು ರೈತರಿಗೆ ಯಾವ ಯಾವ ಸೌಲಭ್ಯ ಪಡೆಯಲು ಬೇಕಾಗುತ್ತದೆ:
ಫ್ರೂಟ್ಸ್ ಐಡಿಯು ರೈತರಿಗೆ ರೈತರ ಫ್ರೂಟ್ಸ್ ಐಡಿ ಬೆಳೆ ವಿಮೆ, ಬೆಳೆ ಹಾನಿಯ ಪರಿಹಾರ ಮತ್ತು ಬರ ಪರಿಹಾರ ಹಾಗೂ ಸರ್ಕಾರದ ಈಗಿನ ಯೋಜನೆಗಳಿಂದ ಸಬ್ಸಿಡಿ ಪಡೆಯಲು ರೈತರಿಗೆ ಫ್ರೂಟ್ಸ್ ಐಡಿ ತುಂಬಾ ಮುಖ್ಯವಾಗಿ ಬೇಕಾಗುತ್ತದೆ. ತೋಟಗಾರಿಕೆ ಕೃಷಿ, ರೇಷ್ಮೆ, ಪಶುಸಂಗೋಪನೆ, ಸೇರಿದಂತೆ ಎಲ್ಲಾ ವಿವಿಧ ಇಲಾಖೆಗಳಿಂದ ಸಬ್ಸಿಡಿ ಸೌಲಭ್ಯವನ್ನು ಪಡೆಯಲು ರೈತರ ಬಳಿ ಅಗತ್ಯವಾಗಿ ಫ್ರೂಟ್ಸ್ ಐಡಿ ಇರಬೇಕು ಹಾಗಾಗಿ ಪ್ರತಿಯೊಬ್ಬ ರೈತರು ಅವರ ಹೆಸರಿಗೆ ಫ್ರೂಟ್ಸ್ ಐಡಿಯನ್ನು ಮಾಡಿಸಿಕೊಳ್ಳಬೇಕು, ಇಲ್ಲದಿದ್ದರೆ ಸರ್ಕಾರದ ಯಾವುದೇ ಯೋಜನಗಳ ಸೌಲಭ್ಯಗಳೂ ರೈತರಿಗೆ ಸಿಗುವುದಿಲ್ಲಾ.
ಸ್ನೇಹಿತರೆ, ಈ ಲೇಖನ ತಮಗೆಲ್ಲಾ ಇಷ್ಟವಾದಲ್ಲಿ ನಿಮ್ಮ ಹತ್ತಿರದ ಎಲ್ಲಾ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಎಲ್ಲಾ ಕುಟುಂಬದವರೊಂದಿಗೆ ಹಂಚಿಕೊಳ್ಳಿ.