ಈಗಿನ ಎಲ್ಲಾ ಮೊಬೈಲ್ ನೆಟ್ವರ್ಕ್ (ಟೆಲಿಕಾಂ) ಕಂಪನಿಗಳು ಗ್ರಾಹಕರ ಬೇಡಿಕೆಗೆ ತಕ್ಕಂತೆ ತಮ್ಮ ರಿಚಾರ್ಜ್ ಪ್ಲ್ಯಾನ್ ಗಳನ್ನು ಲಾಂಚ್ ಮಾಡುತ್ತವೆ. ಅಂದರೆ ಗ್ರಾಹಕರಿಗೆ ಎಂತಹ ರಿಚಾರ್ಜ್ ಪ್ಲ್ಯಾನ್ಸ್ ಗಳು ಬೇಕು ಎಂಬುದರ ಬಗ್ಗೆ ಟೆಲಿಕಾಂ ಕಂಪನಿಗಳಿಗೆ ಸಾಮಾನ್ಯ ಮಾಹಿತಿ ಇರುತ್ತದೆ.ಅದರಂತೆ ಬಳಕೆದಾರರು ಡೇಟಾ ಹೊಂದಿರುವ ಪ್ಲ್ಯಾನ್ ಬಳಸುತ್ತಾರೋ, ಅಥವಾ ಬರೀ ಸಿಮ್ ಅನ್ನು ಸಕ್ರಿಯವಾಗಿ ಇರಿಸಿಕೊಳ್ಳುವ ಪ್ಲ್ಯಾನ್ ಗಳನ್ನು ಅಳವಡಿಸಿಕೊಳ್ಳುತ್ತಾರೋ, ಇನ್ನು ಹೆಚ್ಚು ದಿನ ಮಾನ್ಯತೆಯುಳ್ಳ ರಿಚಾರ್ಜ್ ಪಡೆಯುತ್ತಾರೋ, ಎಂದು ತಿಳಿದುಕೊಳ್ಳತ್ತವೆ.
ಇದೇ ರೀತಿ ನೀವೂ ಕೂಡ ನಿಮಗೆ ಯಾವ ಪ್ಲಾನ್ಸ್ ಗಳು ಉಪಯುಕ್ತ ಎಂದು ನೋಡಿಕೊಂಡು ನಿಮ್ಮ ಪ್ಲ್ಯಾನ್ ನಿರ್ಧರಿಸಿಕೊಳ್ಳಬಹುದು.
Airtel, Reliance Jio, Vi ಹಾಗೂ BSNL ಗಳಂತಹ ವಿವಿಧ ಟೆಲಿಕಾಂ ಕಂಪನಿಗಳು ವಿವಿಧ ರೀತಿಯ ರೀಚಾರ್ಜ್ ಪ್ಲಾನ್ಸ್ ಗಳನ್ನು ನೀಡುತ್ತವೆ. ಈ ಸಾಲಿಗೆ ಸರ್ಕಾರಿ ಸೌಮ್ಯದ ಟೆಲಿಕಾಂ ಕಂಪನಿ BSNL ಕಂಪನಿಯು ಅಗ್ಗದ ರೀಚಾರ್ಜ್ ಯೋಜನೆಗಳಿಗೆ ಹೆಸರುವಾಸಿಯಾಗಿದೆ.
BSNL ಕಂಪನಿಯು ಇನ್ನು ತನ್ನ ಗ್ರಾಹಕರಿಗೆ ವೇಗದ ಇಂಟರ್ನೆಟ್ ಸೇವೆಗಳನ್ನು ವದಗಿಸುವಲ್ಲಿ ವಿಫರಾಗಿದ್ದರೂ ಸಹ, ಇದರ ರಿಚಾರ್ಜ್ ಪ್ಲ್ಯಾನ್ ಗಳು ಹಣ ಉಳಿಸುವ ದೃಷ್ಟಿಯಿಂದ ಬೇರೆ ಎಲ್ಲ ಟೆಲಿಕಾಂ ಕಂಪನಿಗಳಿಗಿಂತ ಕಡಿಮೆ ಆಗಿವೆ.
ಅಗ್ಗದ ಬೆಲೆಯಲ್ಲಿ (BSNL) ರಿಚಾರ್ಜ್ ಮಾಡಿಕೊಳ್ಳಬಹುದು:
ಈ ಅಗ್ಗದ ರಿಚಾರ್ಜ್ ಪ್ಲ್ಯಾನ್ ಅನ್ನು ನೀವು ಒಂದು ವೇಳೆ 108 ರೂಪಾಯಿಗಳ ರಿಚಾರ್ಜ್ ಮಾಡಿಸಿಕೊಂಡಲ್ಲಿ ನಿಮಗೆ ಈ ರಿಚಾರ್ಜ್ ಪ್ಲ್ಯಾನ್ ನಲ್ಲಿ ಕಾಲ್ ಫೆಸಿಲಿಟಿ ನೀಡಲಾಗುವುದಿಲ್ಲ ನಿಮಗೆ ಕಾಲ್ ಫೆಸಿಲಿಟಿ ಬೇಕೆಂದರೆ ಕೆಳಗೆ ನೀಡಲಾದ ₹139 ರೂ. ಅಗ್ಗದ ರೀಚಾರ್ಜ್ ಪ್ಲಾನ್ ಅನ್ನು ವಿವರವಾದ ಮಾಹಿತಿ ನೀಡಲಾಗಿದೆ. ಈ ರೀಚಾರ್ಜ್ ಯೋಜನೆಯನ್ನು ನೀವು ಅಸ್ತಿತ್ವದಲ್ಲಿರುವ ನಿಮ್ಮ ರೀಚಾರ್ಜ್ ಯೋಜನೆಯೊಂದಿಗೆ ಅಳವಡಿಸಿಕೊಳ್ಳಲು ಒಂದು ಉತ್ತಮ ಆಯ್ಕೆಯಾಗಿದೆ
BSNL 108 ರೂ. ರೀಚಾರ್ಜ್ ಮಾಡಿಸಿಕೊಂಡಲ್ಲಿ ನೀವು 60 ದಿನಗಳ ವರೆಗೆ 1 GB ಡೇಟಾವನ್ನು ಬಳಸಬಹುದು. ಅಲ್ಲದೆ ಈ ರಿಚಾರ್ಜ್ ಪ್ಲ್ಯಾನ್ ನಲ್ಲಿ 500 SMS ಕಳಿಸುವ ಪ್ರಯೋಜನವೂ ಇದೆ. ಒಂದು ವೇಳೆ ನಿಮ್ಮ ಡೇಟಾ ಖಾಲಿಯಾದಾಗ, ನೀವು ಪ್ರತಿ MB ಗೆ 5 ಪೈಸೆ ಎಂತೆ ಹಣ ನೀಡಬೇಕು.
₹139 ರೂ. ಅಗ್ಗದ ರೀಚಾರ್ಜ್ ಪ್ಲಾನ್ ನ ವಿವರ:
ನೀವು ಕರೆ ಮಾಡುವ ಪ್ರಯೋಜನ ಪಡೆಯಲು ಬಯಸಿದ್ದಲ್ಲಿ, ನೀವು BSNL ನ ₹139 ರೂ. ಗಳ ರೀಚಾರ್ಜ್ ಯೋಜನೆಯ ಲಾಭ ಪಡೆಯಬಹುದಾಗಿದೆ. ಇದರೊಂದಿಗೆ ಅನಿಯಮಿತ ಅಂದರೆ (Unlimited) ಕರೆಗಳ ಲಾಭವು ಬಳಕೆದಾರರಿಗೆ ಸಿಗುವುದು. ಇಷ್ಟೇ ಅಲ್ಲದೆ ಬಳಕೆದಾರರು ಪ್ರತಿ ದಿನಕ್ಕೆ ಸುಮಾರು 1.5GB ಡೇಟಾವನ್ನು ಸಹ ಬಳಕೆ ಮಾಡಿಕೊಳ್ಳಬಹುದು.
ನಿಮ್ಮ ಡೇಟಾದ ಮಿತಿಯು ಮುಗಿದ ನಂತರ, ನೀವು 40 ಕೆಬಿಪಿಎಸ್ ವೇಗ ದಲ್ಲಿ ಇಂಟರ್ನೆಟ್ ಅನ್ನು ಕೂಡ ಬಳಸಬಹುದಾಗಿದೆ. ಈ ರೀಚಾರ್ಜ್ ಪ್ಲಾನ್ 28 ದಿನಗಳ ಅವಧಿಯ ವರೆಗೆ ಮಾನ್ಯತೆ ಪಡೆದಿರುತ್ತದೆ.
ಇತ್ತಿಚಿಗೆ ಅಂದರೆ ಕೆಲವು ದಿನಗಳ ಹಿಂದೆ (BSNL) ಬಿಎಸ್ಎನ್ಎಲ್ ಇಂತಹದ್ದೇ ಒಂದು ಆಫರ್ ಅನ್ನು ನೀಡಿ ಗ್ರಾಹಕರ ಮನ ಗೆಲ್ಲುವಲ್ಲಿ BSNL ಕಂಪನಿಯು ಯಶಸ್ವಿಯಾಗಿತ್ತು. ಈಗ ಅದೇ ರೀತಿ BSNL ಕಂಪನಿಯು ₹108 ರೂಪಾಯಿಯ ರಿಚಾರ್ಜ್ ಪ್ಲ್ಯಾನ್ ನೊಂದಿಗೆ ಮತ್ತೆ ಬಳಕೆದಾರರಿಗೆ ಖುಷಿ ನೀಡಲಿದೆ.
ಹೀಗೆ BSNL ಟೆಲಿಕಾಂ ಕಂಪನಿಯು ಇಂತಹ ಮತ್ತಷ್ಟು ರೀಚಾರ್ಜ್ ಪ್ಲಾನ್ ಗಳನ್ನು ನೀಡುತ್ತಲೇ ಬಂದಿದೆ. ನೀವು ಸಹಾ ನಿಮಗೆ ಅನುಗುಣವಾಗುವ ರೀಚಾರ್ಜ್ ಪ್ಲಾನ್ ಅನ್ನು ಸಕ್ರಿಯವಾಗಿಸಿಕೊಳ್ಳಿ.
ಈ ಲೇಖನವನ್ನು ನೀವು ಇಲ್ಲಿಯವರೆಗೆ ಸಂಪೂರ್ಣವಾಗಿ ಓದಿದಕ್ಕೆ ಧನ್ಯವಾದಗಳು.