ರಾಜ್ಯದಾದ್ಯಂತ ಉದ್ಯೋಗ ಬಯಸಿ ನೌಕಾರಿಗೆ ಪ್ರಯತ್ನಿಸುತ್ತಿರುವ ಉದ್ಯೋಗ ಆಕಾಂಕ್ಷಿಗಳಿಗೆ ಬೆಂಗಳೂರಿನ BMRCL ಇಲಾಖೆ ಕಡೆಯಿಂದ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. (ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್) BMRCL ತನ್ನಲ್ಲಿ ಉಳಿಸಿಕೊಂಡಿರೋ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಯ ಪ್ರಕ್ರಿಯೆಯನ್ನು ಆರಂಭಿಸಿದೆ.
(ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್) BMRCL ಇದಕ್ಕೆ ಸಂಬಂಧಿಸಿದ ಎಲ್ಲಾ ವಿವರವನ್ನು ತನ್ನ ಅಧಿಕೃತ ಅಧಿಸೂಚನೆಯಲ್ಲಿ ಹಂಚಿಕೊಂಡಿದೆ. ಈ ಲೇಖನದ ಮೂಲಕ ನೋಟಿಫಿಕೇಶನ್ ನಲ್ಲಿ ಈ ಹುದ್ದೆಗಳ ಬಗ್ಗೆ ತಿಳಿಸಿರುವ ಎಲ್ಲಾ ಮುಖ್ಯ ಮಾಹಿತಿಗಳನ್ನು ನಿಮಗೆ ತಿಳಿಸಲು ಬಯಸುತ್ತಿದ್ದೇವೆ. ಈ ಕುರಿತ ಎಲ್ಲಾ ವಿವರಗಳು ಕೆಳಗಿನಂತಿವೆ
ನೇಮಕಾತಿ ಸಂಸ್ಥೆಯ ಹೆಸರು | BMRCL ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ |
ಹುದ್ದೆಗಳ ಹೆಸರು | ಸ್ಟೇಷನ್ ಕಂಟ್ರೋಲರ್ ಹುದ್ದೆಗಳು ಮತ್ತು ಟ್ರೈನ್ ಆಪರೇಟರ್ ಹುದ್ದೆಗಳು |
ಹುದ್ದೆಗಳ ಸಂಖ್ಯೆ | ಸ್ಟೇಷನ್ ಕಂಟ್ರೋಲರ್ – 69 ಹುದ್ದೆಗಳು, 2. ಟ್ರೈನ್ ಆಪರೇಟರ್ – 27 ಹುದ್ದೆಗಳು |
ಒಟ್ಟು ಎಲ್ಲಾ ಹುದ್ದೆಗಳ ಸಂಖ್ಯೆ | 96 ಹುದ್ದೆಗಳು |
ಉದ್ಯೋಗದ ಸ್ಥಳ | ಬೆಂಗಳೂರು |
BMRCL ಹುದ್ದೆಗಳಿಗೆ ಬೇಕಾದ ಶೈಕ್ಷಣಿಕ ವಿದ್ಯಾರ್ಹತೆಯ ವಿವರ:
ಈ BMRCL ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ SSLC ಅಂದರೆ 10th ನಲ್ಲಿ ಉತ್ತೀರ್ಣರಾಗಿರಬೇಕು ಮತ್ತು ನಿರ್ದಿಷ್ಟಪಡಿಸಿದ ಬ್ರಾಂಚ್ ನಲ್ಲಿ ಮೂರು ವರ್ಷದ ಕಾಲ ಡಿಪ್ಲೋಮಾ ಕೋರ್ಸ್ ಅನ್ನು ಅಭ್ಯಾಸ ಮಾಡಿರಬೇಕು
BMRCL ಹುದ್ದೆಗಳಿಗೆ ಬೇಕಾದ ವಯೋಮಿತಿಯ ವಿವರ:
- ಈ BMRCL ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಕನಿಷ್ಠ ವಯೋಮಿತಿಯು 21 ವರ್ಷಗಳು
- ಈ BMRCL ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿಯು 45 ವರ್ಷಗಳು
BMRCL ಹುದ್ದೆಗಳಿಗೆ ಅರ್ಜಿ ಶುಲ್ಕದ ವಿ ವಿವರ:
ಈ BMRCL ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ ಎಂದು ಅಧಿಕೃತ ಅಧಿಸೂಚನೆಯಲ್ಲಿ ಪ್ರಕಟಿಸಿದೆ.
Jio Online Work From Home Job: ಜಿಯೋದಲ್ಲಿ ಮನೆಯಿಂದ ಕೆಲಸ, 55000 ಸಾವಿರ ಸಂಬಳ, ಅಪ್ಲಿಕೇಶನ್ ಪ್ರಾರಂಭವಾಗಿದೆ
BMRCL ಹುದ್ದೆಗಳಿಗೆ ನಿಗದಿಪಿಸಲಾಗಿರುವ ವೇತನ ಶ್ರೇಣಿಯ ವಿವರ:
ಈ BMRCL ಹುದ್ದೆಗಳಿಗೆ ಆಯ್ಕೆ ಆಗುವಂತಹ ಅಭ್ಯರ್ಥಿಗಳಿಗೆ ಆಯಾ ಹುದ್ದೆಗಳ ಪ್ರಾಕಾರ ₹35,000 ರೂ. ಗಳಿಂದ ₹82,660 ರೂ. ಗಳವರೆಗೆ ಮಾಸಿಕ ವೇತನವನ್ನು ನಿಗದಿಪಿಸಲಾಗಿದೆ.
BMRCL ಹುದ್ದೆಗಳಿಗೆ ಆಯ್ಕೆಯ ವಿಧಾನ:
BMRCL ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ಕೂಡ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುತ್ತದೆ.
ನಂತರ ಈ ಹಂತದಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕೌಶಲ್ಯ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಕೌಶಲ್ಯ ಪರೀಕ್ಷೆ ನಡೆದ ನಂತರ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇರ ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆ (Document Verification) ನಡೆಸಿ ಅರ್ಹರನ್ನು ಈ ನೇಮಕಾತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
BMRCL ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:
- ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಪ್ರಾರಂಭ ದಿನಾಂಕ – 14/ಜೂನ್/2024
- ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ – 10/ಜುಲೈ/2024
- ನಿಮ್ಮ ಅರ್ಜಿಯ ಹಾರ್ಡ್ ಕಾಪಿಯನ್ನು ಅಂಚೆ ಮೂಲಕ ಇಲಾಖೆಗೆ ತಲುಪಿಸಲು ಕಡೆಯಾ ದಿನಾಂಕವು :- 15/ಜುಲೈ/2024.
BMRCL ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ.?
- ಅಭ್ಯರ್ಥಿಗಳು ಆನ್ಲೈನ್ ನ ಮುಖಾಂತರವೇ ಅರ್ಜಿ ಸಲ್ಲಿಸಬೇಕು.
- ಮೊದಲು ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು BMRCL ಅಧಿಕೃತವಾದ ವೆಬ್ ಸೈಟ್ ಗೆ ಭೇಟಿ ನೀಡಿಬೇಕು.
- ನಂತರ ನೇಮಕಾತಿ Careers ವಿಭಾಗಕ್ಕೆ ಹೋಗಿ ಅರ್ಜಿಯನ್ನು ಸಲ್ಲಿಸುವ ಲಿಂಕ್ ಗಾಗಿ ಹುಡುಕಿ.
- ನಂತರ ಆ ಲಿಂಕ್ ಕ್ಲಿಕ್ ಮೇಲೆ ಮಾಡಿ ನಿಮಗೆ ಕೆಳಗಾಗಿರುವ ಎಲ್ಲಾ ಕಡ್ಡಾಯ ದಾಖಲೆ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
- ಅರ್ಜಿ ಸಲ್ಲಿಕೆಯನ್ನು ಯಶಸ್ವಿಯಾಗಿ ಮಾಡಿದ ಮೇಲೆ, ತಪ್ಪದೆ ನಿಮ್ಮ ಅರ್ಜಿಯ ಸ್ಪೀಕೃತಿ ಪ್ರತಿಯನ್ನು ಪಡೆದುಕೊಳ್ಳಿ.
- ಈ ಪ್ರಿಂಟ್ ಔಟ್ ನ ಜೊತೆಯಲ್ಲಿ ನಿಮ್ಮ ಶೈಕ್ಷಣಿಕ ವಿದ್ಯಾರ್ಹತೆ, ವಯೋಮಿತಿ ಹಾಗೂ ಎಲ್ಲಾ ಪೂರಕ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಬೆಂಗಳೂರಿನಲ್ಲಿರುವ BMRCL ನ ಅಧಿಕೃತ ಕಛೇರಿಯ ವಿಳಾಸಕ್ಕೆ ತಿಳಿಸಿರುವ ಕಡೆಯ ದಿನಾಂಕದ ಒಳಗೆ ಅಂಚೆ ಮೂಲಕ ತಲುಪಿಸಬೇಕು.
ವೆಬೈಟ್ ವಿಳಾಸ:
ಈ BMRCL ನೇಮಕಾತಿಯ ಕುರಿತಂತೆ ಯಾವುದೇ ಮಾಹಿತಿಯು ಬೇಕಿದ್ದರೂ ಅಥವಾ ಅರ್ಜಿ ಸಲ್ಲಿಸಲು ಹಾಗೂ ಹಾರ್ಡ್ ಕಾಪಿಯನ್ನು ಇಲಾಖೆಗೆ ಕಳುಹಿಸಲು ಬೇಕಾದ ಅಂಚೆ ವಿಳಾಸದ ಮಾಹಿತಿಯನ್ನು ತಿಳಿದುಕೊಳ್ಳಲು (BMRCL) ವೆಬ್ ಸೈಟ್ ಭೇಟಿ ಕೊಡಿ ಲಿಂಕ್ ಕೆಳಗೆ ನೀಡಲಾಗಿದೆ.
ಅಧಿಕೃತ ಅಧಿಸೂಚನೆಯಲ್ಲಿ ಲಿಂಕ್ | ನೋಟಿಫಿಕೇಶನ್ ಲಿಂಕ್ |
ಅಧಿಕೃತ ವೆಬ್ ಸೈಟ್ ಭೇಟಿ ಕೊಡಲು ಲಿಂಕ್ | https://english.bmrc.co.in/ or https://www.bmrc.co.in/career/ |
ಇದೇ ರೀತಿ ಬೇರೆ ಹುದ್ದೆಗಳನ್ನು ನೋಡಲು ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ನಿಮಗೆ ಈ ಉದ್ಯೋಗ ಮಾಹಿತಿಯು ಇಷ್ಟವಾದಲ್ಲಿ ತಪ್ಪದೆ ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರ ಜೊತೆಗೂ ಮತ್ತು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ.