Anna Bhagya Amount : ಅನ್ನಭಾಗ್ಯ ಯೋಜನೆಯ ಹಣವು ಜಮಾ ಆಗದೇ ಇರುವವರು ಬೇಗ ಈ ಕೆಲಸ ಮಾಡಿ.!! ಇಲ್ಲಿದೆ ಇದರ ಪೂರ್ತಿ ವಿವರ.!!

Anna Bhagya Amount : ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ವ್ಯಾಪಕವಾಗಿ ಹರಡಿವೆ ಮತ್ತು ಬಡವರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುತ್ತಿವೆ. ಹೌದು, ಗೃಹಲಕ್ಷ್ಮಿ (Gruhalakshmi), ಗೃಹ ಜ್ಯೋತಿ (Gruhajyoti), ಯುವನಿಧಿ (Yuvanidhi), ಶಕ್ತಿ ಯೋಜನೆ (Shakti Scheme) ಹೀಗೆ ಅದರಲ್ಲೂ ಅನ್ನಭಾಗ್ಯ (Anna Bhagya)ಯೋಜನೆಯ ಸದ್ದು ಜೋರಾಗಿದೆ. ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ವಿತರಿಸುವ ಜತೆಗೆ ಅನ್ನಭಾಗ್ಯ ಯೋಜನೆಯಿಂದಲೂ ಸಹ ಸರ್ಕಾರ ಹಣವನ್ನು ಫಲಾನುಭಿಗಳ ಖಾತೆಗೆ ನೇರವಾಗಿ ಜಮಾ ಮಾಡುತ್ತಿದೆ. ಆದರೆ ಮೂರು ತಿಂಗಳಿಂದ ಅನ್ನಭಾಗ್ಯ ಹಣ ಜಮಾ ಆಗಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಇನ್ನೂ ಹಣ ಬಿಡುಗಡೆಯಾಗದ ಫಲಾನುಭವಿಗಳಿಗೆ ಒಂದು ಗುಡ್ ನ್ಯೂಸ್. ಈ ಲೇಖನವನ್ನೂ ಸಂಪೂರ್ಣವಾಗಿ ಓದಿರಿ.

Anna Bhagya Amount : ಅನ್ನ ಭಾಗ್ಯ ಯೋಜನೆಯ ಹಣ ಜಮಾ ಆಗದಿರುವವರು ಬೇಗ ಈ ಕೆಲಸಗಳನ್ನು ಮಾಡಿಕೊಳ್ಳಿ.!

ಅದೇ ರೀತಿ ಅನ್ನ ಭಾಗ್ಯ ಯೋಜನೆ ಹಣ ಸಿಗದವರ ಅನುಕೂಲಕ್ಕಾಗಿ ಆಧಾರ್ ಕೆವೈಸಿ ಅಭಿಯಾನ ಹಮ್ಮಿಕೊಳ್ಳಬೇಕು ಎಂದು ಕಲಘಟಗಿ ಕಾರ್ಮಿಕ ಸಚಿವ ಶಾಸಕ ಸಂತೋಷ ಲಾಡ್ ಅವರು ಹೇಳಿದರು. ಈ ಕುರಿತು ಕಲಹಟಗಿಯ ಜಿಲ್ಲಾಡಳಿತ, ತಾಲೂಕು ಕಚೇರಿ ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಗರ ಮತ್ತು ಗ್ರಾಮೀಣ ಪ್ರದೇಶದ ಆಯ್ದ ನ್ಯಾಯಬೆಲೆ ಅಂಗಡಿಗಳಲ್ಲಿ ಕೆ.ವೈ.ಸಿ KYC ಸ್ಥಾಪಿಸಲಾಗಿದ್ದು, ವಾರಕ್ಕೊಮ್ಮೆ ಶಿಬಿರ ಆಯೋಜಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಮನೆಯಲ್ಲಿರುವ ಹಿರಿಯ ನಾಗರಿಕರ ಬ್ಯಾಂಕ್ ಖಾತೆಗೆ Kg ಗೆ ₹35 ರೂ. 5 Kg ಗೆ ₹170 ರೂ. ಮೂರು ತಿಂಗಳಿಂದ ಅನ್ನಭಾಗ್ಯ ಹಣ ಸಿಗದೇ ಇರುವವರಿಗೆ ಶೀಘ್ರವೇ ಹಣ ವರ್ಗಾವಣೆ ಮಾಡಿಸುವುದಾಗಿ ಸಚಿವರು ಈಗಾಗಲೇ ಹೇಳಿದ್ದಾರೆ. ಅನ್ನಭಾಗ್ಯ ಯೋಜನೆಯ ಹಣವು ಜಮಾ ಆಗದೆ ಇರುವವರು ಮೊದಲು ತಮ್ಮ ಮನೆಯ ಮುಖ್ಯಸ್ಥರ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಿ ಹಾಗೂ ನಿಮ್ಮ ಎಲ್ಲಾ ದಾಖಲೆಗಳನ್ನು ಸರಿಪಡಿಸಿಕೊಳ್ಳಬೇಕು. ಅದೇ ರೀತಿ, (Ration Card) ಪಡಿತರ ಚೀಟಿಯ KYC ಅನ್ನು ನವೀಕರಿಸಿ ಮಾಡಿಸಿಕೊಳ್ಳಿ. ಪಡಿತರ ಚೀಟಿ ಪಡೆಯದವರು ಮನೆಯ ಮುಖ್ಯಸ್ಥರ ಬ್ಯಾಂಕ್ ಖಾತೆಯಲ್ಲಿ ಮಾರ್ಪಾಡು ಕೆ.ವೈ.ಸಿ KYC ಕಾರ್ಡ್ ಅನ್ನು ಸಹ ನವೀಕರಿಸಬೇಕು.

ಈಗಾಗಲೇ ಅನ್ನಭಾಗ್ಯ ಯೋಜನೆಯ ಹಣವನ್ನು ಏಪ್ರಿಲ್ ವೇಳೆಗೆ ಕೆಲವು ಫಲಾನುಭವಿಗಳ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದ್ದು, ಜೂನ್ ತಿಂಗಳ ಹಣವೂ ಈ ತಿಂಗಳ ಎರಡು ವಾರಗಳಲ್ಲಿ ಖಾತೆಗೆ ಜಮಾ ಆಗಲಿದೆ ಎಂದು ಈಗಾಗಲೇ ವಿವಿಧ ಮೂಲಗಳಿಂದ ವರದಿಯಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಸಚಿವರು ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಹಣ ಬಿಡುಗಡೆ ಮಾಡಲಾಗುವುದು ಎಂದರು.

WhatsApp Group Join Now
Telegram Group Join Now

Leave a Comment

error: Don't Copy Bro !!